Priyanka Gandhi: ಆಗ್ರಾಕ್ಕೆ ತೆರಳಿದ್ದ ಪ್ರಿಯಾಂಕಾ ಗಾಂಧಿಗೆ ಪೊಲೀಸರಿಂದ ತಡೆ
ಲಕ್ನೋ: ಲಖೀಂಪುರ ಘಟನೆಯಲ್ಲಿ ಹತ್ಯೆಗೀಡಾದ ರೈತರ ಕುಟುಂಬಸ್ಥರನ್ನು ಭೇಟಿ ಮಾಡಲು ತೆರಳಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರ ಅವರನ್ನು ತಡೆದು ಬಂಧಿಸಿದ್ದ ಕೆಲದಿನಗಳಲ್ಲೇ ಈಗ ಮತ್ತೊಂದೆಡೆ ಭೇಟಿ ನೀಡಲು ತೆರಳಿದ್ದ ಅವರನ್ನು ತಡೆದಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿರುವಾಗ ಸಾವನ್ನಪ್ಪಿದ ವ್ಯಕ್ತಿಯ ಕಟುಂಬಸ್ಥರನ್ನು ಭೇಟಿಯಾಗಲು ಆಗ್ರಾಕ್ಕೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕಿಯನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಪ್ರಿಯಾಂಕಾ ಗಾಂಧಿ ಪೊಲೀಸನ್ನು ಉದ್ದೇಶಿಸಿ, ನಾನು ಎಲ್ಲಿಗೆ ಹೋಗುವುದಿದ್ದರೂ ಅನುಮತಿ ಕೇಳಬೇಕೇ? ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅಧಿಕಾರಿ ಪ್ರತಿಕ್ರಿಯಿಸಿ, ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಾಗ, ಏನು ಸಮಸ್ಯೆ? ಯಾರೋ ಸತ್ತಿದ್ದಾರೆ.. ಕಾನೂನು ಹಾಗೂ ಸುವ್ಯವಸ್ಥೆ ಸಮಸ್ಯೆ ಏನು ಹೇಳಿ ..” ಎಂದು ಪ್ರಿಯಾಂಕಾ ಕೇಳಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿರುವ ಅರುಣ್ ಕುಟುಂಬಸ್ಥರೊಂದಿಗೆ ಮಾತನಾಡಲು ತೆರಳುತ್ತಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ತಡೆಯಲು ಉತ್ತರ ಪ್ರದೇಶದ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.