Latest

ಗಾಂಜಾ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಆರೋಪ: ಎಪಿಎಂಸಿ ನವನಗರ ಪೊಲೀಸ್ ಠಾಣೆ ಪಿಐ ಸೇರಿ 7 ಜನ ಅಮಾನತು

ಧಾರವಾಡ: ಹುಬ್ಬಳ್ಳಿಯಲ್ಲಿ ಪೊಲೀಸರೇ ಗಾಂಜಾ ಪ್ರಕರಣ ಒಂದನ್ನು ಮುಚ್ಚಿಹಾಕಲು ಯತ್ನಿಸಿದ ಗಂಭೀರ ಆರೋಪದಡಿ, ಎಪಿಎಂಸಿ – ನವನಗರ ಪೊಲೀಸ್​ ಠಾಣೆಯ ಇನ್ಸ್​ಪೆಕ್ಟರ್ ಸೇರಿದಂತೆ ಏಳು ಸಿಬ್ಬಂದಿಯನ್ನು ಅಮಾನತು ಮಾಡಿ, ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಲಾಬುರಾಮ್​ ಆದೇಶ ಹೊರಡಿಸಿದ್ದಾರೆ.

ಎಪಿಎಂಸಿ – ನವನಗರ ಪೊಲೀಸ್ ಠಾಣೆ ಪೊಲೀಸ್ ಇನ್ಸ್​ಪೆಕ್ಟರ್ ವಿಶ್ವನಾಥ ಚೌಗಲೆ, ಎಎಸ್‌ಐ ಕರಿಯಪ್ಪಗೌಡ, ಕಾನ್ಸ್​ಟೇಬಲ್‌ಗಳಾದ ವಿಕ್ರಮ್​ ಪಾಟೀಲ, ನಾಗರಾಜ, ಶಿವರಾಜ್​​​​​ ಕುಮಾರ್ ಮೇತ್ರಿ ಹಾಗೂ ಗೋಕುಲ ರಸ್ತೆ ಠಾಣೆಯ ಮಹಿಳಾ ಕಾನ್ಸ್​ಟೇಬಲ್ ದಿಲ್ಶಾದ, ಹೊನ್ನಪ್ಪನವರ ಎಂಬುವರನ್ನು ಅಮಾನತು ಮಾಡಲಾಗಿದೆ.

ಗಾಂಜಾ ಮಾರಾಟಗಾರರ ಕುರಿತು ಎಪಿಎಂಸಿ ಠಾಣೆ ಸಿಬ್ಬಂದಿಗೆ ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದರು. ಇದರ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡು ಒಂದೂವರೆ ಕೆಜಿ ಗಾಂಜಾ ವಶಕ್ಕೆ ಪಡೆದಿದ್ದರು. ಆದರೆ, ಈ ಕುರಿತು ಪ್ರಕರಣ ದಾಖಲಿಸದ ಪೊಲೀಸರು, ಆರೋಪಿಗಳಿಂದ ಹಣ ಪಡೆದು ಕೇಸ್​ ಕೈಬಿಟ್ಟಿದ್ದ ಗಂಭೀರ ಆರೋಪ‌ಕೇಳಿ ಬಂದಿತ್ತು. ಜೊತೆಗೆ ವಶಪಡಿಸಿಕೊಂಡಿದ್ದ ಗಾಂಜಾವನ್ನು ತಾವೇ ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೂಡಾ ಕೇಳಿಬಂದಿತ್ತು.

ಈ ಹಿನ್ನೆಲೆಯಲ್ಲಿ ಡಿಸಿಪಿ ಕೆ.ರಾಮರಾಜನ್ ಅವರಿಗೆ ಪ್ರಕರಣದ ಕುರಿತು ತನಿಖೆ ಮಾಡಲು ಪೊಲೀಸ್ ಆಯುಕ್ತರು ಸೂಚಿಸಿದ್ದರು. ಡಿಸಿಪಿ ಸಲ್ಲಿಸಿದ ವರದಿಯ ಆಧಾರದ ಮೇಲೆ ಆಯುಕ್ತರು ನವನಗರ ಪೊಲೀಸ ಠಾಣೆಯ ಇನ್ಸ್​ಪೆಕ್ಟರ್ ಸೇರಿ ಏಳು ಮಂದಿ ಪೊಲೀಸರನ್ನು ಅಮಾನತುಗೊಳಿಸಿ ಬೀಸಿ ಈಗ ಅವಳಿನಗರ ಪೊಲೀಸರಿಗೆ ಬೀಸಿ‌ ಮುಟ್ಟಿಸಿದ್ದಾರೆ

Related Articles

Leave a Reply

Your email address will not be published. Required fields are marked *

Back to top button