ನಮ್ಮ ಕನ್ನಡ ಸಾಹಿತ್ಯ ಬಹಳ ಶ್ರೀಮಂತವಾಗಿದೆ: ಸಿಎಂ ಬಸವರಾಜ ಬೊಮ್ಮಾಯಿ
ಧಾರವಾಡ: ದೇಶದಲ್ಲಿ ಕನ್ನಡ ಭಾಷೆ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಕನ್ನಡ ಭಾಷೆಯನ್ನು ಕಾಲ ಕಾಲಕ್ಕೆ ಕವಿವರತ್ನರು, ಸಾಹಿತಿಗಳು ಶ್ರೀಮಂತಗೊಳಿಸುತ್ತಾ ಬಂದಿದ್ದಾರೆ. ನಮ್ಮ ಕನ್ನಡ ಸಾಹಿತ್ಯ ಬಹಳ ಶ್ರೀಮಂತವಾಗಿದ್ದು, ವಿಶ್ವದ ಹಲವು ಭಾಷೆಗಳಲ್ಲಿ ಯಾವುದಾದರೂ ಒಂದು ಭಾಷೆ ಶ್ರೀಂಮತವಾಗಿದೆ. ಅಂದರೆ ಅದೂ ನಮ್ಮ ಹೆಮ್ಮೆಯ ಕನ್ನಡ ಭಾಷೆಯಾಗಿದೆ. ನಮ್ಮ ಕನ್ನಡ ಶ್ರೀಮಂತಿಕೆಯ ಕುರಿತು ನಾವೆಲ್ಲರೂ ಹೆಮ್ಮೆ ಪಡಬೇಕು. ಹಾಗಾಗಿ ಪ್ರತಿಯೊಬ್ಬರೂ ಪ್ರತಿದಿನ ಕನ್ನಡ ಭಾಷೆಯನ್ನು ಬಳಕೆ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಜನತೆಗೆ ಕರೆ ನೀಡಿದರು.
ಹುಬ್ಬಳ್ಳಿಯ ಅಶೋಕ ನಗರದ ಕನ್ನಡ ಭವನದಲ್ಲಿ ನಡೆದ ಲಕ್ಷ ಕಂಠಗಳಲ್ಲಿ ಕನ್ನಡ ಗೀತಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಕನ್ನಡ ಭಾಷೆ ಉಳಿದರೆ ಮಾತ್ರ ನಾವು ಉಳಿಯುತ್ತೇವೆ ಎಂಬ ನಿಟ್ಟಿನಲ್ಲಿ, ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಬಳಸಬೇಕು. ಕನ್ನಡ ಕೆಲವು ಪದ ಕೋಶಗಳು ವಿದೇಶಿ ಭಾಷೆಗಳಲ್ಲಿ, ಇಂದು ಭಾಷಾಂತರವಾಗುತ್ತಿವೆ. ಹಾಗಾಗಿ ಕನ್ನಡಿಗರಾಗಿ ನಾವು ಹೆಮ್ಮೆ ಪಡಬೇಕು. ಕನ್ನಡ ಭಾಷೆ ಬೆಳವಣಿಗೆ ಮಾಡುವುದು, ಶ್ರೀಂಮತ ಮಾಡುವುದು ಕನ್ನಡಿಗರಾದ ನಮ್ಮ ಮೇಲೆ ಹೆಚ್ಚು ಜವಾಬ್ದಾರಿ ಇದೆ. ನಾವೆಲ್ಲರೂ ಪ್ರತಿದಿನ ಕನ್ನಡ ಭಾಷೆಯನ್ನು ಪ್ರತಿಯೊಂದು ಹಂತದಲ್ಲಿ ಬಳಕೆ ಮಾಡುವುದರಿಂದ ನಮ್ಮ ಭಾಷೆಯನ್ನು ಇನ್ನಷ್ಟು ಶ್ರೀಮಂತ ಮಾಡಬಹುದಾಗಿದೆ ಎಂದರು.
ಕನ್ನಡದಲ್ಲಿ ಇಂಜಿನಿಯರಿಂಗ್ ಪದವಿ ನೀಡಲು 15 ಶಿಕ್ಷಣ ಸಂಸ್ಥೆಗಳು ಮುಂದೆ ಬಂದಿವೆ:
ಇಂಜಿನಿಯರಿಂಗ್ ಪದವಿ ಸರ್ಟಿಫಿಕೇಟ್ ಹಾಗೂ ಇಂಜಿನಿಯರಿಂಗ್ ಪದವಿ ಕಲಿಕೆಯನ್ನು ಕನ್ನಡದಲ್ಲಿ ಆಗುವಂತೆ ಮಾಡಿದ್ದೇವೆ. ಈಗಾಗಲೇ 15 ಶಿಕ್ಷಣ ಸಂಸ್ಥೆಗಳು ಕನ್ನಡದಲ್ಲಿ ಇಂಜಿನಿಯರಿಂಗ್ ಪದವಿ ನೀಡಲು ಮುಂದೆ ಬಂದಿದ್ದಾವೆ. ಇಲ್ಲಿ ಕನ್ನಡದಲ್ಲೇ ಇಂಜಿನಿಯರಿಂಗ್ ಕಲಿಸುವುದರ ಜೊತೆಗೆ ಡಿಗ್ರಿ ಸರ್ಟಿಫಿಕೇಟ್ನ್ನು ಕೂಡಾ ನಮ್ಮ ಭಾಷೆಯಲ್ಲಿ ನೀಡಲಾಗುತ್ತದೆ, ಇದೊಂದು ಐತಿಹಾಸಿಕವಾದ ಘಟಕವಾಗಿದೆ. ನಮ್ಮ ಸರ್ಕಾರ ಕನ್ನಡ ಭಾಷೆ ಬೆಳವಣಿಗೆಗೆ, ಶ್ರೀಮಂತ ಮಾಡಲು ಸದಾ ಸಿದ್ಧರಾಗಿರುತ್ತದೆ. ದೇಶದಲ್ಲಿ ಹಲವಾರು ಭಾಷೆಗಳು ಇವೆ, ಅದರಲ್ಲಿ ನಮ್ಮ ಕನ್ನಡ ಭಾಷೆಯನ್ನು ಬೆಳೆಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ. ನಮ್ಮ ಗುರುತು ಕನ್ನಡವಾಗಿರಬೇಕು ಎಂದು ಹೇಳಿದರು.