Latest

Siddaramaianh: ಆರ್‌ಎಸ್‌ಎಸ್ ಒಂದು ಕೋಮುವಾದಿ ಸಂಘಟನೆ: ಸಿದ್ದರಾಮಯ್ಯ.

ಧಾರವಾಡ : ಆರ್ ಎಸ್ ಎಸ್ ಸಂಘಟನೆಯ ಮುಖವಾಡವೇ ಬಿಜೆಪಿ ಪಕ್ಷವಾಗಿದೆ. ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿ ಮಾಡುವುದು ಈ ಸಂಘಟನೆಯ ಕಾಯಕವಾಗಿದೆ. ಹಿಂದೂ ಹಾಗೂ ಮುಸ್ಲಿಂರ ನಡುವೆ ತಂದಿಟ್ಟು ಶಾಂತಿ ಕದಡುವ ಕೆಲಸವನ್ನು ಈ ಹಿಂದಿನಿಂದಲೂ ಆರ್ ಎಸ್ ಎಸ್ ಮಾಡಿಕೊಂಡು ಬಂದಿದೆ. ಹಾಗಾಗಿ ಇದೊಂದು ಕೋಮುವಾದಿ ಸಂಘಟನೆಯಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯರವರು ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂಧಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ ಧರ್ಮಗಳನ್ನು ಗೌರವದಿಂದ ಕಾಣುತ್ತದೆ. ಆರ್ ಎಸ್ ಎಸ್‌ನ- ಬಿಜೆಪಿ ಹಾಗೇ ನಾವು ಅದರಲ್ಲಿ ನಂಬಿಕೆ ಇಟುಕೊಂಡಿಲ್ಲ. ಆರ್ ಎಸ್ ಎಸ್ ಮುಖವಾಡವೇ ಬಿಜೆಪಿಯಾಗಿದ್ದು, ಅವರ ನಿರ್ದೇಶನದ ಮೇರೆಗೆ ಬಿಜೆಪಿ ಆಡಳಿತ ನಡೆಸುತ್ತಾ ಬರುತ್ತಿದೆ. ಆರ್​​ಎಸ್​​ಎಸ್​​ ಸುಮಾರು ನಾಲ್ಕು ಸಾವಿರ ಜನ ಐಎಎಸ್, ಐಪಿಎಸ್ ಅಧಿಕಾರಿಗಳಾಗಿದ್ದಾರೆ ಎಂಬ ಮಾಹಿತಿ ಕುಮಾರಸ್ವಾಮಿಯರಿಗೆ ಎಲ್ಲಿಂದ ಮಾಹಿತಿ ಸಿಕ್ಕಿದೆ ಅನ್ನುವುದು ನನಗೆ ಗೊತ್ತಿಲ್ಲ ಎಂದು ಆರ್​​ಎಸ್​​​ಎಸ್​ ವಿರುದ್ಧ ಕೀಡಿಕಾರಿದರು.

ಜೆಡಿಎಸ್‌‌ ಯಾವಾಗಲೂ ಕಾಂಗ್ರೆಸ್ ಪಕ್ಷವನ್ನೇ ಟಾರ್ಗೆಟ್ ಮಾಡುತ್ತದೆ:

ಜೆಡಿಎಸ್ ಪಕ್ಷವು ಈ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡುತ್ತಲ್ಲೇ ಬರುತ್ತಿದೆ.‌ಈ ಹಿಂದೆ ಬಸವ ಕಲ್ಯಾಣ ಚುನಾವಣೆ ನಡೆದ ಸಂದರ್ಭದಲ್ಲಿ ಅಲ್ಪ ಸಂಖ್ಯಾತ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಿದ್ದರು. ಈಗ ಹಾನಗಲ್ ಉಪ ಚುನಾವಣೆಯಲ್ಲೂ ಅಲ್ಪ ಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದಾರೆ. ಹಾಕಲಿ ಅದಕ್ಕೆ ನಾನು ಬೇಡ ಎನ್ನುವುದಿಲ್ಲ. ಅಲ್ಪ ಸಂಖ್ಯಾತರನ್ನು ಚುನಾವಣೆಗೆ ನಿಲ್ಲಿಸಬಾರದು ಅಂತಾ ಹೇಳುತ್ತಿಲ್ಲ. ಆದರೆ ಜೆಡಿಎಸ್‌ನವರು ಎಲ್ಲಿ ಅಲ್ಪ ಸಂಖ್ಯಾತರನ್ನು ನಿಲ್ಲಿಸಬೇಕು ಅಲ್ಲಿ ಸ್ಪರ್ಧೆ ಮಾಡಿಸಲಿಲ್ಲ, ಮಂಡ್ಯ, ಹಾಸನಗಳಲ್ಲಿ ಹಾಕಬಹುದಾಗಿತ್ತು. ಆದರೆ ಎಲ್ಲಿ ಗೆಲ್ಲುವುದಿಲ್ಲ ಅಲ್ಲಿ ಅಲ್ಯ ಸಂಖ್ಯಾತರನ್ನು ತಂದು ಸ್ಪರ್ಧೆ ಮಾಡಿಸುತ್ತಾರೆ. ಜೆಡಿಎಸ್ ಪ್ರಾಬಲ್ಯ ಇರುವುದು ಹಳೇ ಮೈಸೂರಿನಲ್ಲಿ. ಅಲ್ಲಿ ನಾವೂ ಕೂಡಾ ಸ್ಟ್ರಾಂಗ್ ಇದ್ದೇವೆ, ಅಲ್ಲಿ ಗೆಲುವು ಸಾಧಿಸಲು ಜೆಡಿಎಸ್‌ಗೆ ಆಗುವುದಿಲ್ಲ. ಹಾಗಾಗಿ ಹಾನಗಲ್‌ನಲ್ಲಿ ಕಾಂಗ್ರೆಸ್ ಪಕ್ಷವನ್ನು ಜೆಡಿಎಸ್ ಟಾರ್ಗೆಟ್ ಮಾಡಿದೆ ಎಂದರು.

ಹಾನಗಲ್, ಸಿಂದಗಿ ಉಪಚುನಾವಣೆ:

ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲ್ಲುತ್ತಾರೆ. ರಾಜ್ಯದ ಜನತೆ ಬಿಜೆಪಿ ಆಡಳಿತ ವೈಫಲ್ಯವನ್ನು ನೋಡಿದ್ದಾರೆ. ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರುತ್ತಲೇ ಹೋಗುತ್ತಿದೆ. ಪೆಟ್ರೋಲ್-ಡಿಸೇಲ್ ಬೆಲೆ ದಿನೇ ದಿನೇ ಏರುತ್ತಿದೆ. ಹಾಗಾಗಿ ಬಿಜೆಪಿಗೆ ಜನ ಮತ ನೀಡುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಬೆಲೆ ನಿಯಂತ್ರಿಸುವುದರಲ್ಲಿ ವಿಫಲರಾಗಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಇಲ್ಲಿ ತಮಟೆ ಹೊಡೆಯುತ್ತಿದ್ದಾರೆ ಎಂದು ಹರಿಹಾಯ್ದರು.

ರಾಷ್ಟ್ರ ರಾಜಕೀಯಕ್ಕೆ ಅಹ್ವಾನ ನೀಡಿಲ್ಲ:

ಸೋನಿಯಾ ಗಾಂಧಿಯವರು ನಮ್ಮ ಪಕ್ಷದ ರಾಷ್ಟ್ರೀಯ ನಾಯಕಿಯಾಗಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲು ಅಹ್ವಾನಿಸಿದ್ದರು. ಅದಕ್ಕೆ ಭೇಟಿಯಾಗಿ ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆ ಹಾಗೂ ಇಲ್ಲಿಯ ಚುನಾವಣೆಗಳ ಕುರಿತು ಚರ್ಚೆ ನಡೆಸಿದ್ದೇವೆ. ರಾಷ್ಟ್ರ ರಾಜಕಾರಣಕ್ಕೆ ನಮ್ಮ ನಾಯಕರು ಅಹ್ವಾನಿಸಿಲ್ಲ, ಅದು ಸುಳ್ಳು. ಅದರ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

Related Articles

Leave a Reply

Your email address will not be published.

Back to top button