ಲಖಿಂಪುರ ಖೇರಿಗೆ ಪ್ರತಿಪಕ್ಷಗಳ ಭೇಟಿಗೆ ಅವಕಾಶ; ಅಮಿತ್ ಶಾ ಭೇಟಿಯಾದ ಅಜಯ್ ಮಿಶ್ರಾ
ನವದೆಹಲಿ: ಕಡಗೂ ಲಖಿಂಪುರ ಖೇರಿಗೆ ಹೋಗಲು ಪ್ರತಿಪಪಕ್ಷಗಳಿಗೆ ಅವಕಾಶ ನೀಡಲಾಗಿದೆ. ರೈತರ ಕೊಲೆ ನಡೆದಿರುವ ಸ್ಥಳಕ್ಕೆ ಹೋಗಲು ಅವಕಾಶ ನಿರಾಕರಿಸಿದ್ದ ಉತ್ತರ ಪ್ರದೇಶ ಸರ್ಕಾರ ತೀವ್ರ ಟೀಕೆ ಬಳಿಕ ಮಣಿದಿದೆ.
ಪ್ರತಿಯೊಂದು ಪಕ್ಷಗಳಿಂದ ಗರಿಷ್ಠ ಐವರು ನಾಯಕರ ಭೇಟಿಗೆ ಅವಕಾಶ ನೀಡಲಾಗಿದೆ. ಇದಕ್ಕೂ ಮೊದಲು ಪ್ರಿಯಾಂಕಾ ಗಾಂದಿ ಅಲ್ಲಿಗೆ ತೆರಳುತ್ತಿದ್ದಾಗ ಬಂಧಿಸಲಾಗಿತ್ತು. ರಾಹುಲ್ ಗಾಂಧಿ ಅವರಿಗೂ ಅಲ್ಲಿ ಹೋಗಲು ಅವಕಾಶ ನಿರಾಕರಿಸಲಾಗಿತ್ತು.
ಈ ಮಧ್ಯೆ, ದೆಹಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ರೈತರ ಮೇಲೆ ವ್ಯವಸ್ಥಿತ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ದೇಶದಲ್ಲಿ ಸರ್ವಾಧಿಕಾರವಿದೆ ಎಂದು ಅವರು ಟೀಕಿಸಿದ್ದಾರೆ.
ಇನ್ನೊಂದು ಬೆಳವಣಿಗೆಯಲ್ಲಿ, ಕೇಂದ್ರ ಗೃಹಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಅಜಯ್ ಮಿಶ್ರಾ ಪುತ್ರನೇ ಖಲಿಂಪುರ ಖೇರಿ ಹಿಂಸಾಚಾರಕ್ಕೆ ಕಾರಣವೆಂಬ ಆರೋಪವಿದ್ದು, ಆತನ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಆದರೆ ಬಂಧಿಸದೇ ಇರುವುದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಲೇ ಇದೆ.