Latest

ಮಧ್ಯಪ್ರದೇಶದಲ್ಲಿ ನೋಟಾಗೆ ಗಣನೀಯ ಮತಚಲಾವಣೆ; ಬಿಜೆಪಿ-ಕಾಂಗ್ರೆಸ್ ಗೆ ಎಚ್ಚರಿಕೆಯ ಗಂಟೆ

ಭೋಪಾಲ್ : ಮಧ್ಯಪ್ರದೇಶದಲ್ಲಿ ನಡೆದ ಉಪಚುನಾವಣೆಯಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳ ಫಲಿತಾಂಶದಲ್ಲಿ ನೋಟಾ (ನನ್ ಆಫ್ ದಿ ಎಬೋವ್)ಗೆ ಮತ ಚಲಾವಣೆ ಮಾಡಿದವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿರುವುದು ಕಂಡುಬಂದಿದ್ದು, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆರಡಕ್ಕೂ ಎಚ್ಚರಿಕೆಯ ಗಂಟೆಯನ್ನು ಭಾರಿಸಿದೆ.

ಜೋಬಾಟ್ ಕ್ಷೇತ್ರದಲ್ಲಿ ಬಿಜೆಪಿಯ ಸುಲೋಚನಾ ರಾವತ್ ಅವರು ಕಾಂಗ್ರೆಸ್ಸಿನ ಮಹೇಶ್ ಪಟೇಲ್ ಅವರನ್ನು 6104 ಮತಗಳ ಅಂತರದಿಂದ ಸೋಲಿಸಿದ್ದು, ಇಲ್ಲಿ ನೋಟಾ ಮೇಲೆ 5603 ಮತಗಳು ಚಲಾವಣೆಯಾಗಿವೆ. ಪೃಥ್ವಿಪುರ ಕ್ಷೇತ್ರದಲ್ಲಿ ನೋಟಾ 1,741 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದೆ. ರಾಯಗಾಂವ್ನಲ್ಲಿ 1436 ಮತಗಳು, ಖಾಂಡ್ವಾ ಲೋಕಸಭಾ ಕ್ಷೇತ್ರದಲ್ಲಿ 13627 ಮತಗಳು ನೋಟಾಗೆ ಚಲಾವಣೆಯಾಗಿವೆ.

ಇದು ಆಡಳಿತ ಪಕ್ಷದಿಂದ ಮತದಾರರು ಬೇಸತ್ತಿದ್ದಾರೆ ಎಂದು ತೋರಿಸುತ್ತದೆ. ಆದರೆ ನೋಟಾಗೆ ಮತ ಹಾಕುವುದು ವಿರೋಧ ಪಕ್ಷಕ್ಕೆ ಕಳವಳಕಾರಿ ವಿಷಯವಾಗಿದೆ.

Related Articles

Leave a Reply

Your email address will not be published.

Back to top button