Latestಸಿನಿಮಾ

Nikhil Kumarswamy: ಚಾಮುಂಡಿಬೆಟ್ಟಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ

ಮೈಸೂರು: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪುತ್ರ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ.

ನಿಖಿಲ್‌ಗೆ ಮಾಜಿ ಸಚಿವ ಜಿ ಟಿ ದೇವೇಗೌಡರ ಪುತ್ರ ಹರೀಶ್ ಗೌಡ ಸಾಥ್ ನೀಡಿದ್ದು, ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದು, ಬಹಳ ಕುತೂಹಲ ಕೆರಳಿಸಿದೆ. ದರ್ಶನ ಪಡೆದ ಬಳಿಕ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ನನ್ನ ಹೊಸ ಚಿತ್ರದ ಅರ್ಶಿವಾದ ಪಡೆಯಲು ಬಂದಿದ್ದೇನೆ, ರಾಜ್ಯದ ಜನಕ್ಕೆ ಒಲಿತು ಮಾಡಲಿ ಅಂತಾ ಬೇಡಿಕೊಂಡಿದ್ದೇನೆ.

ಯಾವುದೇ ರೀತಿಯ ರಾಜಕೀಯ ಮಾಡಲು ಬಂದಿಲ್ಲ. ನಮ್ಮ ಹರೀಶ್ ಗೌಡರ ಸ್ನೇಹ ದೊಡ್ಡದು, ರಾಜಕೀಯ ಹೊರೆತಾಗಿ ನಮ್ಮ ಸ್ನೇಹ ಇದೆ, ಸಂಘಟನೆ ವಿಚಾರದಲ್ಲಿ ಎಲ್ಲವೂ ಸರಿ ಹೋಗುತ್ತೆ. ಮುಂದಿನ ದಿನಗಳಲ್ಲಿ ಬದಲಾವಣೆಗಳಿವೆ. ಎಲ್ಲಾ ಸಮಸ್ಯೆ ಗಳು ಸರಿ ಹೋಗಲಿದೆ ಎಂದರು.

ಬಳಿಕ ಮಾತನಾಡಿದ ಹರೀಶ್ ಗೌಡ ನಿಖಿಲ್ ಕುಮಾರಸ್ವಾಮಿಯವರ ಜೊತೆ ಚಾಮುಂಡಿ ಈ ಭೇಟಿಯಲ್ಲಿ ಯಾವುದೇ ರಾಜಕೀಯ ಇಲ್ಲ. ನಾನು ನಿಖಿಲ್ ರವರು ಸ್ನೇಹಿತರು, ಮೈಸೂರಿಗೆ ಬಂದಾಗ ಅವರನ್ನು ಭೇಟಿ ಮಾಡುತ್ತೇನೆ, ಇದರಲ್ಲಿ ಯವುದೇ ರಾಜಕೀಯ ಇಲ್ಲ ಎಂದರು.

Related Articles

Leave a Reply

Your email address will not be published.

Back to top button