Latest

ಮುಂದಿನ ಶೈಕ್ಷಣಿಕ ವರ್ಷದಿಂದ ನೂತನ ಶಿಕ್ಷಣ ನೀತಿ ಜಾರಿ: ಶಿಕ್ಷಣ ಸಚಿವ ಬಿ ಸಿ ನಾಗೇಶ್

ದಾವಣಗೆರೆ: ಮುಂದಿನ ಶೈಕ್ಷಣಿಕ ವರ್ಷದಿಂದ ನೂತನ ಶಿಕ್ಷಣ ನೀತಿ ಜಾರಿ ಮಾಡಲಾಗುವುದು. ಇದಕ್ಕೆ ಬೇಕಾದ ತಯಾರಿ ಈಗಾಗಲೇ ಶುರುವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಹೇಳಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ನೂತನ ಶಿಕ್ಷಣ ಜಾರಿ ಸಂಬಂಧ ಮದನ್ ಗೋಪಾಲ್ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ರಚನೆಯಾಗಿದೆ 0-1,3, 9 ತರಗತಿಗಳನ್ನ ಪ್ರಾರಂಭಿಸಲು ಸಿದ್ಧತೆ ನಡೆದಿದೆ ಎಂದು ತಿಳಿಸಿದರು.

ಶಿಕ್ಷಕರ ತರಬೇತಿ ಎಲ್ಲ ಮುಗಿದರೆ ನೂತನ ಪಠ್ಯಕ್ರಮ ಪ್ರಾರಂಭ ಮಾಡಲಾಗುತ್ತದೆ. ಗಾಳಿಬೀಡು ನವೋದಯ ಶಾಲೆಯ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆ ಆಗಿದ್ದು, ಅಲ್ಲಿ ಇಬ್ಬರಿಗೆ ಜ್ವರ ಬಂದಿತ್ತು. ಬಳಿಕ ಪರೀಕ್ಷೆ ಮಾಡಿದಾಗ 31 ವಿದ್ಯಾರ್ಥಿಗಳಲ್ಲಿ ಲಕ್ಷಣ ಕಂಡು ಬಂದಿವೆ. ಯಾರಿಗೂ ಯಾವುದೇ ತೊಂದರೆಯಿಲ್ಲ ಎಂದು ಸ್ಪಷ್ಟಪಡಿಸಿದರು.

ಸದ್ಯ ಶಾಲೆಯನ್ನ ಮೂರು‌ ದಿನ ಬಂದ್ ಮಾಡಿ ಬಳಿಕ ಸ್ಯಾನಿಟೈಸ್ ಮಾಡಿ ಶುರು ಮಾಡುತ್ತೇವೆ. ಅದು ಶಾಲೆಗಳಿಂದ ಹಬ್ಬಿಲ್ಲ, ತಂದೆ-ತಾಯಿಗಳಿಂದ ಬಂದಿರಬಹುದು. ಮಕ್ಕಳಿಗೆ ಕೋವಿಡ್ ನಿಂದ ತುಂಬಾ ಅನ್ಯಾಯವಾಗಿದೆ. ಮುಂದೆ ಮೂರನೇ ಅಲೆ ಬಂದರೆ ಶಾಲೆಯನ್ನ ಮತ್ತೆ ಬಂದ್ ಮಾಡುತ್ತೇವೆ ಎಂದು ಹೇಳಿದರು.

ಸದ್ಯಕ್ಕೆ ಪಠ್ಯ ಕ್ರಮದಲ್ಲಿ ಯಾವುದೇ ಕಡಿತದ ಪ್ರಶ್ನೆ ಇಲ್ಲ. ಕಡಿಮೆ ಮಾಡಿದರೆ ಮುಂದೆ ಮಕ್ಕಳಿಗೆ ತೊಂದರೆಯಾಗತ್ತೆ. ಪರೀಕ್ಷೆ ಬಗ್ಗೆ ಡಿಸೆಂಬರ್ ಬಳಿಕ ಚಿಂತನೆ ಮಾಡುತ್ತೇವೆ ಎಂದರಲ್ಲದೇ, ಅಧಿಕ ಶುಲ್ಕ ಪಡೆಯುವ ಬಗ್ಗೆ ದೂರು ಬಂದಿವೆ, ವಿಚಾರ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

Related Articles

Leave a Reply

Your email address will not be published.

Back to top button