Latest
ಮೈಸೂರು ಮೃಗಾಲಯಕ್ಕೆ ಒಂದೇ ದಿನದಲ್ಲಿ 27 ಸಾವಿರ ಪ್ರವಾಸಿಗರ ವೀಕ್ಷಣೆ
ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಮೈಸೂರಿಗೆ ಪ್ರವಾಸಿಗರ ದಂಡೇ ಹರಿದು ಬಂದಿದೆ. ದಸರಾ ಮೈಸೂರು ಪ್ರವಾಸೋದ್ಯಮಕ್ಕೆ ಪುಷ್ಠಿ ನೀಡಿದ್ದು, ಒಂದೇ ದಿನದಲ್ಲಿ 27 ಸಾವಿರ ಪ್ರವಾಸಿಗರು ಮೃಗಾಲಯ ವೀಕ್ಷಣೆ ಮಾಡಿದ್ದಾರೆ.
ಪ್ರಮುಖ ಪ್ರವಾಸಿ ಸ್ಥಳವಾದ ಮೃಗಾಲಯವನ್ನು ವಿಜಯದಶಮಿ ದಿನದಂದು 27 ಸಾವಿರ ಮಂದಿ ಮೃಗಾಲಯ ವೀಕ್ಷಿಸಿದ್ದಾರೆ. ಇದರಿಂದ ಒಂದೇ ದಿನಕ್ಕೆ 26,67,880ರೂ ಮೃಗಾಲಯಕ್ಕೆ ಆದಾಯ ಹರಿದು ಬಂದಿದೆ.
ದಸರಾ ಮಹೋತ್ಸವದ 10ದಿನಗಳ ಅವಧಿಯಲ್ಲಿ 75 ಸಾವಿರ ಮಂದಿ ಮೃಗಾಲಯ ವೀಕ್ಷಣೆ ಮಾಡಿದ್ದು, ಒಟ್ಟು 77.63ಲಕ್ಷ ಮೃಗಾಲಯಕ್ಕೆ ಆದಾಯ ಬಂದಿದೆ. ಕಳೆದ ಬಾರಿ ಕೊರೊನಾದಿಂದ ಮೃಗಾಲಯದ ಆದಾಯ ನೆಲಕಚ್ಚಿತ್ತು. ಈಗ ದಸರಾ ಹಿನ್ನೆಲೆ ಪ್ರವಾಸೋದ್ಯಮ ಚಟುವಟಿಕೆಯಲ್ಲಿ ಚೇತರಿಕೆ ಕಂಡಿದೆ.
ದಸರಾ ಮಹೋತ್ಸವದಲ್ಲಿ ನಗರದ ವಿದ್ಯುತ್ ದೀಪಾಲಂಕಾರವನ್ನು 10 ದಿನಗಳ ಕಾಲ ವಿಸ್ತರಿಸಲಾಗಿತ್ತು. ಆದ್ದರಿಂದ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಂಡಿದೆ.