Latest

Mysore Dasara 2021: ದಸರೆಯಲ್ಲಿ ತೊಡೆತಟ್ಟಿ ನಿಂತ ಜಗಮಲ್ಲರು

ವರದಿ : ಅಶೋಕ್

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2021 ದಿನೇ ದಿನೇ ಕಳೆಗಟ್ಟುತ್ತಿದೆ ನಾಲ್ಕನೇ ದಿನವಾದ ಇಂದು ಹಲವು ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು. ಪ್ರಮುಖವಾಗಿ ಸಂಗೀತ, ಕುಸ್ತಿ ಸ್ತಬ್ಧಚಿತ್ರಗಳ ತಯಾರಿ ಭರ್ಜರಿಯಾಗಿತ್ತು. ದಸರೆಗೆ ಪ್ರಮುಖ ಆಕರ್ಷಣೆಯಾಗಿದ್ದು, ಸ್ತಬ್ಧ ಚಿತ್ರಗಳು ಜಂಬೂಸವಾರಿ ದಿನ ಮೆರವಣಿಗೆಯಲ್ಲಿ ಎಲ್ಲರ ಕೇಂದ್ರಬಿಂದುವಾಗಲಿವೆ.

ಆಕರ್ಷಕ ಕುಸ್ತಿ ಅಖಾಡ. ಅಖಾಡದಲ್ಲಿ ತೊಡೆ ತಟ್ಟಿ ನಿಂತ ಜಗಮಲ್ಲರು. ನಾ ಮುಂದು ತಾ ಮುಂದು ಅಂತಾ ಪಟ್ಟು ಹಾಕ್ತಾ ಇರೋ ಕುಸ್ತಿ ಪಟಗಳು. ಹುರಿದುಂಬಿಸ್ತಾ ಇದ್ದ ಪ್ರೇಕ್ಷಕರು. ಇದು ಇವತ್ತು ಮೈಸೂರಿನ ಸಾಹುಕಾರ್ ಚೆನ್ನಯ್ಯ ಕುಸ್ತಿ ಅಖಾಡದಲ್ಲಿ ಕಂಡು ಬಂದ ದೃಶ್ಯ.‌ ಇದು ಸರಳ ದಸರಾ ಹಿನ್ನೆಲೆಯಲ್ಲಿ ಸರ್ಕಾರವೇನೋ ದಸರಾ ಕುಸ್ತಿಗೆ ಕೊಕ್ ನೀಡಿತ್ತು. ಆದ್ರೆ ಮೈಸೂರಿನ ಕುಸ್ತಿಪಟುಗಳು ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ತಾವೇ ಖುದ್ದಾಗಿ ಕುಸ್ತಿ ಪಂದ್ಯಾವಳಿಯನ್ನ ಆಯೋಜಿಸಿದ್ದಾರೆ.

ಸುಮಾರು 50 ಜೋಡಿ ಈ ಕುಸ್ತಿಯಲ್ಲಿ ಭಾಗವಹಿಸಿವೆ. ಹಿಂದೆ ದಸರಾ ಕುಸ್ತಿಗಾಗಿ ರಾಜ್ಯದ ಬೇರೆ ಬೇರೆ ಜಿಲ್ಲೆ ಮಾತ್ರವಲ್ಲ ಹೊರ ರಾಜ್ಯದಿಂದಲೂ ಕ್ರೀಡಾಪಟುಗಳು ಆಗಮಿಸುತ್ತಿದ್ದರು. ಆದ್ರೆ ಈ ಬಾರಿ ಸೀಮಿತ ಕುಸ್ತಿಪಟುಗಳು‌ ಮಾತ್ರ ಭಾಗವಹಿಸಿದ್ದಾರೆ. ಕುಸ್ತಿ ಪಟುಗಳ ಸೆಣೆಸಾಣ ಸಾಕಷ್ಟು ಜಬರ್ದಸ್ತಾಗಿತ್ತು. ವಿಜೇತರಿಗೆ ಬಹುಮಾನ ವಿತರಣೆ ಸಹಾ ಮಾಡಲಾಯ್ತು.

ಅರಮನೆಯ ಅಂಗಳದಲ್ಲಿ ದಿನವಿಡೀ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಆಯೋಜಿಸಲಾಗಿತ್ತು. ನವರಾತ್ರಿಯ ಮೊದಲ ಭಾನುವಾರ ಅರಮನೆಯ ಎರಡು ವೇದಿಕೆಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. 15 ಕಲಾ ತಂಡಗಳಿಂದ ವಿವಿಧ ಕಲೆಗಳ ಪ್ರದರ್ಶನ ನೀಡಿದರು. ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಸಾಂಸ್ಕೃತಿಕ ಕಲರವ ಹೆಸರಿನಲ್ಲಿ ಖ್ಯಾತ ಕಲಾವಿದ ಸಂಗೀತ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

ಇತ್ತ ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ 15ರಂದು ಅರಮನೆ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ಮೆರವಣಿಗೆಗಾಗಿ ಸ್ತಬ್ದಚಿತ್ರಗಳು ಸಿದ್ದವಾಗುತ್ತಿವೆ.ಪ್ರತಿ ಬಾರಿ 45ಕ್ಕೂ ಹೆಚ್ಚು ಸ್ತಬ್ದಚಿತ್ರಗಳು ಭಾಗಿಯಾಗುತ್ತಿದ್ದವು, ಆದರೆ ಕೊರೊನಾ‌ ಹಿನ್ನೆಲೆಯಲ್ಲಿ ಈ‌ ಬಾರಿ 6 ಸ್ತಬ್ದಚಿತ್ರಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ಸ್ತಬ್ದಚಿತ್ರಗಳ ವಿವರ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮೈಸೂರಿನಲ್ಲಿ ಸೂರಿನ ಬಗ್ಗೆ ಮಾಹಿತಿಯ ಸ್ತಬ್ದಚಿತ್ರ

ಪರಿಸರ ಇಲಾಖೆಯಿಂದ ಬೇಡ ನನಗೆ ಕೊಡಲಿ ನೆರಳನೇಕೆ ಕೊಡಲಿ ಸ್ತಬ್ದಚಿತ್ರ

ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಸಮಗ್ರ ಕೃಷಿ, ಆರೋಗ್ಯ ಇಲಾಖೆಯಿಂದ ಕೊರೊನಾ‌ ಮುಕ್ತ ಕರ್ನಾಟಕ

ಮೈಸೂರು ದಸರಾ ಉಪಸಮಿತಿಯಿಂದ ಆಜಾದ್ ಕಾ ಅಮೃತ‌ ಮಹೋತ್ಸವ ಹಾಗೂ ಅರಮನೆ ವಾದ್ಯಗೋಷ್ಠಿಯ ಸ್ತಬ್ದಚಿತ್ರಗಳ ತಯಾರಿಕೆಗೆ ಸಿದ್ದತೆ ನಡೆದಿದೆ.

ಸಂಜೆ ಸಹಾ ಅರಮನೆ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಸಂಗೀತಪ್ರಿಯರಿಗೆ ರಸದೌತಣ ನೀಡಲಿದೆ.‌ ಇನ್ನು ದೀಪಾಲಂಕಾರದ ಸಮಯದಲ್ಲಿ ಮತ್ತೆ ಬದಲಾವಣೆಯಾಗಿದ್ದು ಸಂಜೆ 6.30 ರಿಂದ ರಾತ್ರಿ 10 ಗಂಟೆಯವರೆಗೂ ಬೆಳಕಿನ ಚಿತ್ತಾರವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಒಟ್ಟಾರೆ ಕೊರೊನಾ ಭೀತಿಯ ನಡುವೆಯೂ ಮೈಸೂರು ದಸರಾ ಸಡಗರ ಸಂಭ್ರಮದಿಂದ ನಡೆಯುತ್ತಿದೆ.

Related Articles

Leave a Reply

Your email address will not be published. Required fields are marked *

Back to top button