Latest
Mysore Dasara 2021: ಚಿನ್ನದ ಅಂಬಾರಿ ಕಟ್ಟುವ ಕಾರ್ಯಕ್ಕೆ ಚಾಲನೆ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರೆಯ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಈ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಪ್ರಮುಖ ಆಕರ್ಷಣೆಯಾಗಿದ್ದು, ಈಗಾಗಲೇ ಚಿನ್ನದ ಅಂಬಾರಿಯನ್ನ ಹೊರತಂದು ಸಿದ್ದತೆ ಮಾಡಲಾಗುತ್ತಿದೆ.
750 ಕೆಜಿ ತೂಕದ ಚಿನ್ನದ ಅಂಬಾರಿಯನ್ನ ಹೊರತರಲಾಗುತ್ತಿದೆ. ಈ ಚಿನ್ನದ ಅಂಬಾರಿಯನ್ನ ಅಲಂಕಾರ ಮಾಡಿ ಅಭಿಮನ್ಯುವಿನ ಬೆನ್ನಿನ ಮೇಲೆ ಹೊದಿಕೆ ಇಟ್ಟು ಅದರ ಮೇಲೆ ಅಂಬಾರಿಯನ್ನ ಇಡಲಾಗುತ್ತದೆ. ಈಗಾಗಲೇ ಅಂಬಾರಿ ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಮೀನಾ ಲಗ್ನದಲ್ಲಿ 4.36 ರಿಂದ 4.46 ರವರೆಗೆ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ನಂದಿ ಪೂಜೆ ಬಳಿಕ ಜಂಬೂಸವಾರಿ ಆರಂಭವಾಗಲಿದೆ. ಈ ಅಭಿಮನ್ಯುವಿಗೆ ಕುಮ್ಕಿ ಆನೆಗಳಾಗಿ ಕಾವೇರಿ ಮತ್ತು ಚೈತ್ರ ಆನೆಗಳಿವೆ.