Latest

ತನ್ನ ತಂದೆ ಮೃಗಾಲಯದ ಪ್ರಾಣಿಯಲ್ಲ ಎಂದು ಮನಮೋಹನ್​​​ ಸಿಂಗ್ ಪುತ್ರಿ ಆಕ್ರೋಶ: ಕಾರಣವೇನು ಗೊತ್ತೇ?

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್​​​ ಸಿಂಗ್ ಅನಾರೋಗ್ಯದಿಂದ ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರನ್ನು ಭೇಟಿಯಾಗಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವ್ಯ ತಮ್ಮೊಂದಿಗೆ ಫೋಟೋಗ್ರಾಫರನ್ನು ಕರೆದೊಯ್ದು ಫೋಟೋ ತೆಗೆಸಿಕೊಂಡಿರುವುದು ಸಿಂಗ್ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು ಸಿಂಗ್ ಅವರ ಪುತ್ರಿ ದಾಮನ್ ಸಿಂಗ್ ಪ್ರತಿಕ್ರಿಯಿಸಿ, ಆಸ್ಪತ್ರೆಗೆ ಸಚಿವರ ಜತೆಯಲ್ಲಿ ಫೋಟೋಗ್ರಾಫರ್ ಹೋಗಿದ್ದು ನನ್ನ ತಾಯಿಗೆ ಬೇಸರವಾಗಿದೆ. ಹಿರಿಯ ವ್ಯಕ್ತಿಗಳಾಗಿರುವ ನನ್ನ ತಂದೆ ತಾಯಿ ಕಷ್ಟದ ಸನ್ನಿವೇಶ ಎದುರಿಸುತ್ತಿದ್ದು ಅವರೇನು ಮೃಗಾಲಯದಲ್ಲಿರುವ ಪ್ರಾಣಿಗಳಲ್ಲ ಎಂದು ಆಕ್ರೋಶದಿಂದ ಹೇಳಿದ್ದಾರೆ.

ಚಿಕಿತ್ಸೆ ಪಡೆಯುತ್ತಿರುವ ಸಿಂಗ್ ಅವರ ಜತೆಗೆ ಫೋಟೋ ತೆಗೆಯಬೇಡಿ ಎಂದು ಅವರ ಕುಟುಂಬಸ್ಥರು ಕೇಳಿಕೊಂಡರೂ ಸಹ ಅನಾರೋಗ್ಯದಿಂದ ಬಳಲಿರುವ ಮನ್ಮೋಹನ್ ಸಿಂಗ್ ಜತೆಯಲ್ಲಿ ಸಚಿವರು ಫೋಟೋ ತೆಗೆಸಿಕೊಂಡಿರುವುದಕ್ಕೆ ಹಲವರು ತೀವ್ರವಾಗಿ ಟೀಕಿಸಿದ್ದಾರೆ.

Related Articles

Leave a Reply

Your email address will not be published.

Back to top button