ಬೆಂಗಳೂರು ಉಸ್ತುವಾರಿಗಾಗಿ ಸಚಿವರುಗಳ ಫೈಟ್- ಬಿಜೆಪಿ ಒಡೆದ ಮನೆ: ಎಸ್ ಆರ್ ಪಾಟೀಲ್ ವ್ಯಂಗ್ಯ
ಬಾಗಲಕೋಟೆ: ಬಿಜೆಪಿ ಪಕ್ಷ ಒಡೆದ ಮನೆ, ಸಚಿವರ ಮಧ್ಯೆ ಸಮನ್ವಯತೆ ಇಲ್ಲ . ಒಬ್ಬರು ಒಂದು ಹೇಳಿಕೆ ಕೊಟ್ರೆ, ಮತ್ತೊಬ್ರು ಮತ್ತೊಂದು ಹೇಳಿಕೆ ಕೊಡ್ತಾರೆ. ಬಿಜೆಪಿ ಪಕ್ಷದಲ್ಲಿ ಬಹಳಷ್ಟು ಭಿನ್ನಾಭಿಪ್ರಾಯಗಳು ಇವೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್ ಆರ್ ಪಾಟೀಲ್ ವ್ಯಂಗ್ಯವಾಡಿದರು.
ಬೆಂಗಳೂರು ಉಸ್ತುವಾರಿಗಾಗಿ ಆರ್.ಅಶೋಕ, ವಿ. ಸೋಮಣ್ಣ ನಡುವಿನ ಪೈಪೋಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರೊಳಗೆ ಸಮನ್ವಯತೆ ಇಲ್ಲ, ಯುನಿಟಿ ಇಲ್ಲ, ಐಕ್ಯತೆ ಇಲ್ಲ. ಬಿಜೆಪಿ ಪಕ್ಷ ಒಡೆದ ಮನೆ, ಛಿದ್ರ ಛಿದ್ರವಾದ ಮನೆವಾಗಿದೆ ಎಂದರು.
ಐಟಿ ದಾಳಿ ಕೇವಲ ಕಾಂಗ್ರೆಸ್ ಮುಖಂಡರ ಮೇಲೆ ಮಾಡ್ತಾರೆ ಅನ್ನೋರು ಬಾಯಿ ಬಿಡ್ತಿಲ್ಲ ಎಂಬ ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಸಂವಿಧಾನಾತ್ಮಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡವರು ಅಂದರೆ ಅದು ಎನ್ಡಿಎ ಸರ್ಕಾರ. ಐಟಿ, ಈಡಿ, ಸಿಬಿಐ, ಚುನಾವಣೆ ಆಯೋಗ ಸೇರಿ ಅನೇಕ ಸಂಸ್ಥೆಗಳನ್ನು ಸ್ವಾತಂತ್ರ್ಯ ಭಾರತದಲ್ಲಿ ಯಾರಾದ್ರೂ ದುರ್ಬಳಕೆ ಮಾಡಿಕೊಂಡಿದ್ರೆ ಅದು ಬಿಜೆಪಿಯವರು ಎಂದು ತಿಳಿಸಿದರು.
ಈಗಿನ ಐಟಿ ರೇಡ್ ನ ಹಿಂದೆ ಹಲವು ಕಾರಣಗಳಿವೆ.ಮಾಜಿ ಸಿಎಂ ಯಡಿಯೂರಪ್ಪ ಬಿಜೆಪಿಯಲ್ಲಿ ಶಕ್ತಿಶಾಲಿ ನಾಯಕರು. ಯಡಿಯೂರಪ್ಪನವರು ಪಕ್ಷದಿಂದ ಹೊರ ಹೋದ ಬಳಿಕ. ಪಕ್ಷದಿಂದ ದೂರ ಹೋದ್ರೆ ಪಕ್ಷಕ್ಕೆ ಹಾನಿಯಾಗುತ್ತೆ ಅನ್ನೋ ಉದ್ದೇಶಕ್ಕೆ. ಬಿಎಸ್ವೈ ಆಪ್ತ ಉಮೇಶ್ ಅವರ ಮೇಲೆ ಐಟಿ ರೇಡ್ ಮಾಡಿದ್ದಾರೆ. ಯಡಿಯೂರಪ್ಪ ಅವರನ್ನ ಕಟ್ಟಿ ಹಾಕೋಕೆ ಅಂಜಿಕೆ ಇಡೋಕೆ ಮತ್ತೊಮ್ಮೆ ಐಟಿಯನ್ನು ದುರುಪಯೋಗ ಮಾಡಿದ್ದಾರೆ ಎಂದು ಹೇಳಿದರು.
ಯಡಿಯೂರಪ್ಪ ಸಿಎಂ ಇದ್ದಾಗ ಇದೇ ಉಮೇಶ ಅವರ ಆಪ್ತ ಸಹಾಯಕರಾಗಿದರು.ಬಹಳಷ್ಟು ದೀರ್ಘಕಾಲದವರೆಗೂ ಇದ್ದಾರೆ.ಈಗ ಕೊನೆಯ ನಿಮಿಷದವರೆಗೂ ಬಿಎಸ್ವೈ ಆಪ್ತ ಸಹಾಯಕರಾಗಿಯೇ ಕೆಲಸ ಮಾಡಿದರು.ಬಿಎಸ್ವೈ ಅಧಿಕಾರದಲ್ಲಿದ್ದಾಗ ರೇಡ್ ಮಾಡಬಹುದಿತ್ತಲ್ವ? ಅಧಿಕಾರದಿಂದ ಕೆಳಗಿಳಿದ ಮೇಲೆ ಯಡಿಯೂರಪ್ಪ ಅವರನ್ನ ಹಿಡಿತದಲ್ಲಿಟ್ಟುಕೊಳ್ಳಬೇಕುಉದ್ದೇಶಕ್ಕೆ ಅಂಜಿಕೆ ಹಾಕುವ ಸಲುವಾಗಿ ಈ ರೇಡ್ ನಡೆದಿರಬಹುದು ಎಂದರು.