Latest

ಕುಮಾರಸ್ವಾಮಿ ಹೆಚ್ಚೆಚ್ಚು ಪುಸ್ತಕ ಓದುತ್ತಿದ್ದಾರೆ, ಹೀಗಾಗಿ ಅವರ ಭಾವನೆ ಬದಲಾಗುತ್ತಿದೆ: ಸಚಿವ ಸೋಮಣ್ಣ

ಕಲಬುರಗಿ: ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟದಿಂದ ಯಡಿಯೂರಪ್ಪ ಅವರ ಬೆಂಬಲಿಗರ ಮೇಲೆ ಐಟಿ ದಾಳಿ ಆಗುತ್ತಿದೆ ಎಂಬ ಎಚ್‌ಡಿ ಕುಮಾರಸ್ವಾಮಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಚಿವ ವಿ ಸೋಮಣ್ಣ ಕುಮಾರಸ್ವಾಮಿಗೆ ಇದಕ್ಕೆ ಬಿಟ್ಟು ಹೇಳಲು ಮತ್ತೇನಿದೆ ಅಂತ ತಿರುಗೇಟು ನೀಡಿದ್ದಾರೆ.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ರಾಜ್ಯದ ಎರಡು ಬಾರಿ ಮುಖ್ಯಮಂತ್ರಿ ಆದವರು, ಅವರ ತಂದೆ ಪ್ರಧಾನಿಯಾದವರು, ರಾಜಕಾರಣದಲ್ಲಿಯೇ ಹುಟ್ಟಿಬೆಳೆದವರು. ಆದಕಾರಣ ಅವರದೇಯಾದ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.ಆದ್ರೆ ಭಾರತೀಯ ಜನತಾ ಪಕ್ಷ ದೇಶದಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ತನ್ನದೇ ಆದ ಕೊಡುಗೆ ಕೊಡುವ ಮುಖೇನ ಎಲ್ಲಾ ವರ್ಗದವರನ್ನೂ ಸರಿ ಸಮನಾಗಿ ತೆಗೆದುಕೊಂಡು ಹೋಗುತ್ತಿರುವ ಪಕ್ಷ ಬಿಜೆಪಿ ಇಲ್ಲ ಯಾವುದೆರೀತಿಯ ಆತಂರಿಕ ಕಚ್ಚಾಟ ಇಲ್ಲ. ಯಡಿಯೂರಪ್ಪ ನಮ್ಮ‌ ಪಕ್ಷದ ಪಕ್ಷಾತೀತ ನಾಯಕರು ಎಂದರು‌.

ಕುಮಾರಸ್ವಾಮಿಗೆ ಅವಶ್ಯಕತೆ ಇಲ್ಲದ ವಿಚಾರ:

ಕುಮಾರಸ್ವಾಮಿ ಇತ್ತೀಚಿಗೆ ಜಾಸ್ತಿ ಪುಸ್ತಗಳನ್ನು ಓದುತ್ತಿದ್ದಾರೆ. ಕಾಲೇಜಿನಲ್ಲಿ ಓದಿದ್ದಕ್ಕಿಂತಲೂ ಹೆಚ್ಚಿನ ಪುಸ್ತಕಗಳನ್ನು ಈಗ ಓದುತ್ತಿದ್ದಾರೆ ಹೀಗಾಗಿ ಆರ್‌ಎಸ್‌ಎಸ್ ವಿಚಾರದಲ್ಲಿ ಅವರ ಭಾವನೆಗಳು ಬದಲಾಗುತ್ತಿವೆ. ಕುಮಾರಸ್ವಾಮಿ ಅವಶ್ಯಕತೆ ಇಲ್ಲದ ವಿಚಾರವನ್ನು ಪದೇ ಪದೇ ಉಲ್ಲೇಖಿಸುವುದು ಸರಿಯಲ್ಲ ಎಂದು ಹೇಳುವ ಮೂಲಕ ಆರ್‌ಎಸ್‌ಎಸ್ ದಿಂದ ಮುಂದೊಂದು ದಿನ ದೇಶ ಹಾಳಾಗಲಿದೆ ಎಂಬ ಕುಮಾರಸ್ವಾಮಿ‌ ಹೇಳಿಕೆಗೆ ತಿರುಗೇಟು ನೀಡಿದರು.

ನಾನು ಕೂಡ ಆರೆಸ್ಸೆಸ್ ನಲ್ಲಿ ಇದ್ದವನು. ಈ ದೇಶಕ್ಕೆ ಸ್ವಾರ್ಥವಿಲ್ಲದೆ ಕೆಲಸ ಮಾಡುತ್ತಿರುವ, ಒಳ್ಳೆಯ ಸಂದೇಶ ಕೊಡ್ತಿರುವಂತಹ, ತತ್ವನಿಷ್ಠಯಿಂದ ಉಳ್ಳಂತಹ ಸಂಸ್ಥೆ ಆರ್ ಎಸ್ ಎಸ್, ಅದರ ಮಾತನಾಡುವ ಅವಶ್ಯಕತೆ ಇಲ್ಲ. ಅವರೊಟ್ಟಿಗೆ ಈ ವಿಚಾರವಾಗಿ ಮಾತಾಡಿದ್ದೆನೆ ಮತ್ತೆ ಸಿಕ್ಕರೆ ಮತ್ತೊಮ್ಮೆ ಮಾತನಾಡುವೆ ಎಂದು ಸೋಮಣ್ಣ ಹೇಳಿದ್ದಾರೆ.

ಸಿಂದಗಿ ಚುನಾವಣೆ ನಮಗೆ ಕಷ್ಟವೆನಲ್ಲ;

ಸಿಂದಗಿ ಉಪಚುನಾವಣೆ ಕುರಿತು ಮಾತನಾಡಿದ ಅವರು, ನಮಗೆ ಅಲ್ಪಸಂಖ್ಯಾತರು ಬೇರೆಯವರು ಎಂಬ ಬೇದವಿಲ್ಲ ರಾಜ್ಯದ ಆರುವರೆ ಕೋಟಿ ಜನ ನಮಗೆ ಒಂದೇ. ನಮ್ಮ ಸರ್ಕಾರದ ಜನಪರ ಕೆಲಸಗಳು‌ ಮಾಡುತ್ತಿದೆ. ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕೊಡುಗೆ, ಯಡಿಯೂರಪ್ಪನವರ ಜನಪರ ಕಾರ್ಯ, ಬಸವರಾಜ್ ಬೊಮ್ಮಾಯಿ ಅವರ ಚಿಂತನೆ ಆಧಾರದ ಮೇಲೆ ನಾವು ಉಪಚುನಾವಣೆಯನ್ನು ಗೆಲ್ಲುತ್ತೇವೆ. ಉಪ ಚುನಾವಣೆಯಲ್ಲಿ ಗೋವಿಂದ ಕಾರಜೋಳ, ಬಸನಗೌಡ ಯತ್ನಾಳ ಸೇರಿದಂತೆ ಕಲಬುರಗಿ, ವಿಜಯಪುರ ಜಿಲ್ಲೆಯ ನಾಯಕರು ಎಲ್ಲರು ಒಂದಾಗಿ ಉಪಚುನಾಣೆಯಲ್ಲಿ ಕೆಲಸಮಾಡ್ತೇವೆ ಹೀಗಾಗಿ ನಮಗೆ ಸಿಂದಗಿ ಚುನಾವಣೆ ಗೆಲುವುದು ಕಷ್ಟವಾಗುವುದಿಲ್ಲ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button