ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಎರಡು ಹೋಳಾಗಲಿದೆ: ಸಚಿವ ಕೆ ಎಸ್ ಈಶ್ವರಪ್ಪ
ಮೈಸೂರು: 2023 ರ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಎರಡು ಹೋಳಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತಣಾಡಿದ ಅವರು, ಮುಂದಿನ ವಿಧಾನ ಸಭೆ ಚುನಾವಣೆಗೂ ಮೊದಲೇ ಕಾಂಗ್ರೆಸ್ ಎರಡು ಹೊಳಾಗುತ್ತೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು. ಇನ್ನೂ ಒಂದೂವರೆ ವರ್ಷ ಕಾಯುವ ಅವಶ್ಯಕತೆ ಇಲ್ಲ. ಡಿ.ಕೆ.ಶಿವಕುಮಾರ್ ಗೂ ಅಧಿಕಾರ ಬೇಕು ಸಿದ್ದರಾಮಯ್ಯರಿಗೂ ಅಧಿಕಾರ ಬೇಕು, ಇದರಿಂದ ಕಾಂಗ್ರೆಸ್ ಎರಡೂ ಹೊಳಾಗುತ್ತೆ ಎಂದು ಭವಿಷ್ಯ ನುಡಿದರು.
ಕೆಲವರಿಗೆ ಎಂಎಲ್ಎ ಸೀಟ್ ಸಿಗಲಿಲ್ಲ ಎನ್ನುವ ಹುಚ್ಚು, ಸಿದ್ದರಾಮಯ್ಯರಿಗೆ ಹುಚ್ಚು ಕನಸಿದೆ. ಮುಖ್ಯಮಂತ್ರಿಯಾಗದಿರಲಿ, ಮುಂಬರುವ ಚುನಾವಣೆಯಲ್ಲಿ ಗೆಲ್ಲಲಿ ಎಂದು ಸವಾಲ್ ಹಾಕಿದ ಅವರು, ಕಳೆದ ಚುನಾವಣೆಯಲ್ಲಿ ಜನ ಯಾಕ್ ಕೈ ಬಿಟ್ರು ನಿಮ್ಮನ್ನ. ಚಾಮುಂಡೇಶ್ವರಿಯಲ್ಲಿ ಯಾಕ್ ಸೋತ್ರಿ ಎಂದು ಪ್ರಶ್ನಿಸಿದರು.
ಜಾತಿಗಣತಿ ಗಣತಿ ವಿಚಾರಕ್ಕೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯನವರು ಸಂಘಟನೆ ಮಾಡಲು ಅಡ್ಡ ದಾರಿ ತುಳಿದಿದ್ದಾರೆ. ಸದನದಲ್ಲಿ ಜಾತಿಗಣತಿ ಬಗ್ಗೆ ಯಾಕ್ ಮಾತಾಡ್ಲಿಲ್ಲ.
ಸಿದ್ದರಾಮಯ್ಯನವರೇನು ಬಾಯಲ್ಲಿ ಕಡುಬು ಇಟ್ಟುಕೊಂಡಿದ್ರಾ..? ಸದನದಲ್ಲಿ ಜಾತಿಗಣತಿಯ ಧ್ವನಿ ಮಾಡ್ತೀವಿ ಅಂದ್ರಿ ಮಾಡುದ್ರಾ..? ಯಾಕ್ ಜಾತಿಗಣತಿ ಬಗ್ಗೆ ಮಾತಡಲಿಲ್ಲ ಎಂದರು.
ಹಿಂದುಳಿದಿರುವ, ಅಲ್ಪಸಂಖ್ಯಾತರು ನಿಮಗೆ ಹೆಸರಿಗೆ ಮಾತ್ರನಾ..? ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಜಾತಿಗಣತಿ ವರದಿ ಸಿದ್ದವಾಗಿದ್ದರೂ ಕುಮಾರಸ್ವಾಮಿ ಮಂಡಿಸಲಿಲಿಲ್ಲ.
ಆಗ ನಿಮ್ಮ ಬೆಂಬಲ ವಾಪಸ್ ತಗೋಬೇಕಿತ್ತು. ಯಾಕೆ ತಗೆದುಕೊಳ್ಳಲಿಲ್ಲ ಇವರಿಗೆ ಯಾವುದೂ ಬೇಕಾಗಿಲ್ಲ. ಅಧಿಕಾರವೊಂದೆ ಇವರ ಗುರಿಯಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯನವರು ಸಂಘಟನೆ ಮಾಡಲು ಅಡ್ಡ ದಾರಿ ತುಳಿದಿದ್ದಾರೆ. ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ. ಅಹಿಂದಕ್ಕೆ ಏನು ಮಾಡಲ್ಲ. ಇದು ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗೆ ಅರ್ಥವಾಗಿದೆ. ಹೀಗಾಗಿ, ಅಹಿಂದ ವರ್ಗ ಕಾಂಗ್ರೆಸ್ ಅನ್ನು ಬೆಂಬಲಿಸುವುದಿಲ್ಲ. ಬಿಜೆಪಿಯನ್ನೇ ಗೆಲ್ಲಿಸಲಿದ್ದಾರೆ ಎಂಬುದಕ್ಕೆ ದೇಶ ಮತ್ತು ರಾಜ್ಯದಲ್ಲಿ ಇತ್ತೀಚಿಗೆ ನಡೆದ ಚುನಾವಣೆಗಳೇ ಉದಾಹರಣೆ ಎಂದರು.
ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸ್ವತಂತ್ರ ಶಕ್ತಿಯಾಗಿ ಹೊರಹೊಮ್ಮಲಿದೆ. ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರು ಭಾಗದಲ್ಲಿ 20ಕ್ಕೂ ಹೆಚ್ಚು ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರಿಗೆ ಹೇಗಾದರೂ ಸರಿ ಸಿಎಂ ಆಗಬೇಕು ಅನ್ನೋ ಹುಚ್ಚು ಇದೆ. ಡಿಕೆ ಶಿವಕುಮಾರ್ ಗೆ ಬಿಜೆಪಿಯವರನ್ನ ಹೇಗಾದರೂ ಎಳೆದುಕೊಳ್ಳಬೇಕು ಅನ್ನೋ ಹುಚ್ಚು ಇದೆ. ಈ ಎರಡು ಹುಚ್ಚರನ್ನ ಹುಚ್ಚಾಸ್ಪತ್ರೆಗೆ ಸೇರಿಸಬೇಕು. ಇದಕ್ಕೆ ಬೇರೆ ಏನು ಉತ್ತರ ಇಲ್ಲ ಎಂದು ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದರು.