Latestಇತರ ಕ್ರೀಡೆ

ವಿಶ್ವ ಟಿಟಿಯಲ್ಲಿ ಇತಿಹಾಸ ಬರೆದ ಕರ್ನಾಟಕದ ಅರ್ಚನಾ ಕಾಮತ್

ಬೆಂಗಳೂರು: ಕರ್ನಾಟಕದ ಅರ್ಚನಾ ಕಾಮತ್ ಹಾಗೂ ಭಾರತದ ನಂ.1 ಆಟಗಾರ್ತಿ ಮನಿಕಾ ಬಾತ್ರ ಲಾಸ್ಕೊದಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸಿಂಗಲ್ಸ್ ಹಾಗೂ ಡಬಲ್ಸ್ ನಲ್ಲಿ ಪದಕವನ್ನು ಖಚಿತಪಡಿಸಿದ್ದಾರೆ.

ವನಿತೆಯರ ಡಬಲ್ಸ್ ನಲ್ಲಿ ಅರ್ಚನಾ ಕಾಮತ್ ಹಾಗೂ ಮನಿಕಾ ಬಾತ್ರ ಚೀನಾದ ಲಿಯು ಮತ್ತು ವಾಂಗ್ ಜೋಡಿಯನ್ನು ಸೋಲಿಸಿ ವಿಶ್ವ ಟಿಟಿ ಡಬಲ್ಸ್ ನಲ್ಲಿ ಫೈನಲ್ ತಲುಪಿದ ಭಾರತದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿಶ್ವದಲ್ಲಿ 58 ನೇ ರಾಂಕ್ ಹೊಂದಿರುವ ಮನಿಕಾ ವಿಶ್ವದ 25 ನೇ ರಾಂಕ್ ಆಟಗಾರ್ತಿ ಬೆರ್ನಾಡೆಟ್ ಸೊಕ್ಸ್ ವಿರುದ್ಧ 3-2 ಅಂತರದಲ್ಲಿ ಜಯಗಳಿಸಿ ಫೈನಲ್ ತಲಪುವ ಮೂಲಕ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿದ್ದಾರೆ.

ಮನವ್ ಠಕ್ಕರ್ ಅವರೊಂದಿಗೆ ಜೊತೆಗೂಡಿದ ಅರ್ಚನಾ ಮಿಶ್ರ ಡಬಲ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇದರೊಂದಿಗೆ ಅರ್ಚನಾ ಕಾಮತ್ ಹಾಗೂ ಮನಿಕಾ ಚಾಂಪಿಯನ್ಷಿಪ್ ನಲ್ಲಿ ತಲಾ ಎರಡು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

Related Articles

Leave a Reply

Your email address will not be published.

Back to top button