Latest

ಡ್ರಾಪ್ ನೆಪದಲ್ಲಿ ಯುವಕನ ಮೇಲೆ ಅತ್ಯಾಚಾರ: ದೂರು ದಾಖಲು

ಬೆಳಗಾವಿ: ಜಿಲ್ಲೆಯ ಚಿಕ್ಕೋಡಿಯಲ್ಲೊಂದು ವಿಚಿತ್ರವಾದ ಅತ್ಯಾಚಾರದ ಘಟನೆ ನಡೆದಿದೆ. ಯುವಕನೋರ್ವ ಇನ್ನೋರ್ವ ಯುವಕನ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಬಸ್‍ಗಾಗಿ ಯುವಕನೋರ್ವ ಕಾಯಿತ್ತಿದ್ದ. ಈ ವೇಳೆ ಬೈಕ್ ಮೇಲೆ ಬಂದ ಕಿರಾತಕ ಡ್ರಾಪ್ ಮಾಡುತ್ತೇನೆ ಬಾ ಎಂದು ಹೇಳಿ ಬೈಕ್ ಮೇಲೆ ಹತ್ತಿಸಿಕೊಂಡಿದ್ದಾನೆ.

ದೂರದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆಂದು ನೊಂದ ಯುವಕ ಪೊಲೀಸರಿಗೆ ದೂರು ನೀಡಿದ್ದಾನೆ. ಇನ್ನು ಈ ಕುರಿತಂತೆ ಅಥಣಿ ಪೊಲೀಸ್ ಠಾಣಾ ಪೊಲೀಸರು ಯುವಕನ ದೂರಿನನ್ವಯ ಪ್ರಕರಣವನ್ನು ದಾಖಲಿಸಿಕೊಂಡು, ಎಫ್‍ಐಆರ್ ದಾಖಲು ಮಾಡಿದ್ದಾರೆ.

ಇನ್ನು ಅತ್ಯಾಚಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ವೈದ್ಯಕೀಯ ಪರೀಕ್ಷೆ ಸೇರಿದಂತೆ ಇತರೆ ಕಾನೂನು ಕ್ರಮಗಳನ್ನ ಕೈಗೊಳ್ಳುತ್ತಿದ್ದಾರೆ. ಇನ್ನು ರಾಜ್ಯಾದ್ಯಂತ ಈ ಘಟನೆ ತೀರ್ವ ಸಂಚಲನ ಉಂಟುಮಾಡಿದೆ. ಯುವಕನ ಮೇಲೆ ಯುವಕನೇ ಈ ರೀತಿ ಅತ್ಯಾಚಾರ ಮಾಡಿರುವ, ಈ ಸಲಿಂಗಿ ಕಾಮುಕನ ಕೃತ್ಯ ತೀವೃ ಚರ್ಚೆಗೆ ಗ್ರಾಸವಾಗಿದೆ

Related Articles

Leave a Reply

Your email address will not be published.

Back to top button