Latest
Norway: ಅನಾಮಧೇಯ ವ್ಯಕ್ತಿಯಿಂದ ಬಿಲ್ಲು-ಬಾಣಗಳಿಂದ ದಾಳಿ: ಐವರ ಸಾವು
ಓಸ್ಲೋ: ನಾರ್ವೆಯ ಕೋಂಗ್ಸ್ ಬರ್ಗ್ ಎಂಬಲ್ಲಿ ದುಷ್ಕರ್ಮಿಯೋರ್ವ ಬಿಲ್ಲು ಮತ್ತು ಬಾಣಗಳನ್ನು ಅಸ್ತ್ರವಾಗಿಸಿ ಬಳಸಿ ಐವರನ್ನು ಭಯಾನಕವಾಗಿ ಹತ್ಯೆ ಮಾಡಿದ್ದಾನೆ. ಇಬ್ಬರು ತೀವ್ರ ಗಾಯಗೊಂಡಿದ್ದಾರೆ.
ನಾರ್ವೆಯ ರಾಜಧಾನಿ ಓಸ್ಲೋದಿಂದ ಸುಮಾರು 70 ಕಿ ಮೀ ದೂರದ ಕೋಂಗ್ಸ್ ಬರ್ಗ್ ಎಂಬಲ್ಲಿ ಈ ದಾಳಿ ನಡೆದಿದೆ. ದುಷ್ಕರ್ಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತ ಕೆಲವರನ್ನು ಬಿಲ್ಲು ಹಾಗೂ ಬಾಣವನ್ನು ಅಸ್ತ್ರವಾಗಿ ಬಳಸಿ ಏಕಾಂಗಿಯಾಗಿ ದಾಳಿ ನಡೆಸಿದ್ದಾನೆ. ಬೇರೆ ಶಸ್ತ್ರಾಸ್ತ್ರಗಳನ್ನು ಬಳಸಿರಬಹುದೇ ಎಂದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಬಾಣಗಳು ಹೊಕ್ಕ ಗುರುತುಗಳು ಕಟ್ಟಡದೊಳಗೆ ಗೋಚರವಾಗಿವೆ. ಇಂತಹ ದುಷ್ಕತ್ಯ ನಡೆದಿರುವುದು ತಿಳಿದ ತಕ್ಷಣ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಬಂದೂಕು ಹೊಂದುವುದನ್ನು ಕಡ್ಡಾಯಗೊಳಿಸಲಾಗಿದೆ.