Latest

ನನಗೆ ಕಲಬುರಗಿ ಜನ ಸೋಲಿಸಿಲ್ಲ, ಮೋದಿ, ಶಾ ಕುತಂತ್ರದಿಂದ ಸೋತಿದ್ದೇನೆ: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಲಬುರಗಿಯಲ್ಲಿ ಭವ್ಯವಾಗಿ ಸ್ವಾಗತ ಕೊರಲಾಗಿದೆ. ಜೆಸಿಬಿ ಹಾಗೂ ಕ್ರೇನ್ ಮೂಲಕ ಹೂವಿನ ಸುರಿಮಳೆಗೈದು ಅದ್ದೂರಿಯಾಗಿ ಬರಮಾಡಿಕೊಳ್ಳಲಾಗಿದೆ.

ಕಳೆದ ಒಂದುವರೆ ವರ್ಷಗಳಿಂದ ಕಲಬುರಗಿಗೆ ಖರ್ಗೆ ಬಂದಿರಲಿಲ್ಲ, ಅಲ್ಲದೆ ರಾಜ್ಯಸಭಾ ವಿರೋಧಪಕ್ಷದ ನಾಯಕರಾಗಿ ಖರ್ಗೆ ಪ್ರಥಮ ಬಾರಿಗೆ ಕಲಬುರ್ಗಿಗೆ ಆಗಮಿಸಿದ್ದಾರೆ. ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಖರ್ಗೆ ಅವರನ್ನು, ಕಲಬುರಗಿ, ಯಾದಗಿರಿ, ಬೀದರ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಹಾಲಿ, ಮಾಜಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಕಾರ್ಯಕರ್ತರು ಅದ್ದೂರಿಯಾಗಿ ಬರಮಾಡಿಕೊಂಡರು. ವಿಮಾನ ನಿಲ್ದಾಣದಿಂದ ಜೈಭವಾನಿ ಕನ್ವೆನ್ಷನ್ ಹಾಲ್ ವರೆಗೆ ತೆರೆದ ವಾಹನದಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ರಸ್ತೆಯುದ್ದಕ್ಕೂ ಜೆಸಿಬಿ ಹಾಗೂ ಕ್ರೇನ್ ಮೂಖಾಂತರ ಹೂ ಮಳೆಗೈಯಲಾಯಿತು. ಖರ್ಗೆ ಸ್ವಾಗತ ಹಿನ್ನಲೆ ನಗರದ ಖರ್ಗೆ ಕ್ರಾಸ್ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫೀಕ್ ಜಾಮ್‌ ಆಗಿತ್ತು.

ನಂತರ ನಗರದ ಜೈಭವಾನಿ ಕನ್ವೆನ್ಷನ್ ಹಾಲ್ ನಲ್ಲಿ ಆಯೋಜಸಿದ ಅಭಿನಂದನ ಸಮಾರಂಭದಲ್ಲಿ ಕಾಂಗ್ರೆಸ್‌ ನಾಯಕರಿಂದ ಸನ್ಮಾನ ಸ್ವೀಕರಿಸಿ‌ದ ಮಾತನಾಡಿದ ಅವರು, ಎರಡು ವರ್ಷಗಳ ಬಳಿಕ ನಾನು ಕಲಬುರಗಿ ಭೂಮಿ ಮೇಲೆ ಕಾಲಿಟ್ಟಿದ್ದೇನೆ‌.‌‌‌‌‌ಮೋದಿ, ಶಾ, ಆರ್ ಎಸ್ ಎಸ್ ಅವರ ಕುತಂತ್ರದಿಂದ ನಾನು ಕಳೆದ ಲೋಕಸಭೆಯಲ್ಲಿ ಸೋತಿದ್ದೇನೆ. ವಿನಹ ಕಲಬುರಗಿ ಜನ ನನಗೆ ಸೋಲಿಸಿಲ್ಲ ಎಂದು ಖರ್ಗೆ ಅವರು ಹೇಳಿದರು. ಪಾರ್ಲಿಮೆಂಟ್ ನಲ್ಲಿ ಸೋಲಿಸೋದಾಗಿ ನನಗೆ ಮೋದಿ ಸೋಲಿಸುವ ವಾರ್ನಿಂಗ್ ನೀಡಿದ್ದರು. ನಮ್ಮವರು ಆಗಲೇ ಎಚ್ಚೆತ್ತುಕೊಳ್ಳಲಿಲ್ಲ ಹೀಗಾಗಿ ಸೋಲಾಯಿತು.

ಸುಳ್ಳು ಹೇಳೊರನ್ನ ನಂಬ್ತಿರಾ, ನಾನು ಸತ್ಯ ಹೇಳೋದನ್ನ ನಂಬೋದಿಲ್ವಾ ?…

ಸುಳ್ಳು ಹೇಳೊರನ್ನ ನಂಬ್ತಿರಾ, ನಾನು ಸತ್ಯ ಹೇಳೋದನ್ನ ನಂಬೋದಿಲ್ವಾ. ನನ್ನ ಉಸಿರಿರೋ ವರೆಗೂ ನಾನು ರಾಜಕೀಯದಲ್ಲಿ ಮುಂದುವರೆಯುತ್ತೇನೆ, ಹೋರಾಟ ಮಾಡುತ್ತೇನೆ. ನಾನು ನಂಬಿರುವ ತತ್ವ ಸಿದ್ದಾಂತಗಳು ಅನುಷ್ಠಾನಕ್ಕೆ ತರೋದೆ ನನ್ನ ಮುಖ್ಯ ಧೇಯ. ಆದ್ರೆ ಎಂ ಎಲ್ ಎ, ಎಂಪಿ ಆಗಬೇಕು ಅನ್ನೋ ಆಸೆ ಇಲ್ಲ. ಜನರ ಮೇಲೆ ಕಾಳಜಿ ಇಟ್ಟು ಕಾಂಗ್ರೆಸ್ ಪಕ್ಷ ಕೆಲಸ ಮಾಡಿದೆ. ಮೋದಿ ನಿಮಗೆ ಫ್ರೀಡಂ ಕೊಟ್ಟಿಲ್ಲ, ಆದ್ರು ಮೋದಿ ಮೋದಿ ಅಂತಿರಾ ?… ಮೋದಿ ಸರ್ಕಾರ ಕೆಟ್ಟ ಸರ್ಕಾರ‌. ಕಾಂಗ್ರೆಸ್ ಗೆ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ದೇಶದ ಜನರನ್ನು ರಕ್ಷಣೆ ಮಾಡಲು ಇದೆ‌. ಕಾಂಗ್ರೆಸ್ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಲು ಇದೆ‌. ಆದ್ರೆ ಬಿಜೆಪಿಯವರು ಹೆಳೋದು ಒಂದು, ಮಾಡೋದೆ ಇನ್ನೊಂದು ಎಂದು ಹಿಂದಿ ಸೇಹರಿ ಹೇಳುವ ಮೂಲಕ ಬಿಜೆಪಿಗೆ ಮಲ್ಲಿಕಾರ್ಜುನ ಖರ್ಗೆ ತಿವಿದರು.

Related Articles

Leave a Reply

Your email address will not be published.

Back to top button