Sringeri Bandh: ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹಿಸಿ ಇಂದು ಶೃಂಗೇರಿ ಬಂದ್
ಚಿಕ್ಕಮಗಳೂರು: ಸದಾ ಜನರಿಂದ ಗಿಜಿಗುಡುತ್ತಿದ್ದ ಶೃಂಗೇರಿ ಪಟ್ಟಣ ಇಂದು ಬಿಕೋ ಎನ್ನತೊಡಗಿದೆ. ಪ್ರಮುಖ ಪ್ರವಾಸಿ ತಾಣ ಹಾಗೂ ಯಾತ್ರಾಸ್ಥಳವಾಗಿರುವ ಶೃಂಗೇರಿ ಪಟ್ಟಣದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣದ ಬೇಡಿಕೆ ಮುಂದಿಟ್ಟುಕೊಂಡು ಸ್ಥಳೀಯರು ನೀಡಿರುವ ಬಂದ್ ಕರೆಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.
ಪಟ್ಟಣದ ಯಾವುದೇ ಅಂಗಡಿ ಮುಂಗಟ್ಟುಗಳು ಬೆಳಗ್ಗೆಯಿಂದ ತೆರೆದೇ ಇಲ್ಲ. ಆಟೋರಿಕ್ಷಾ ಸೇರದಿಂತೆ ಯಾವುದೇ ವಾಹನಗಳು ಸಂಚರಿಸದೆ ರಸ್ತೆಗಳು ಖಾಲಿ ಖಾಲಿಯಾಗಿವೆ.
ರಾಜಕೀಯರಹಿತವಾಗಿ ನಡೆಯುತ್ತಿರುವ ಬಂದ್ ತಾಲೂಕಿನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬಸ್ ಗಳನ್ನು ತಡೆಹಿಡಿದು ಪ್ರತಿಭಟನೆ ನಡೆಸಲಾಗುತ್ತಿದೆ. ಸುಮಾರು 35ಕ್ಕೂ ಹೆಚ್ಚು ಸಂಘಟನೆಗಳಿಂದ ಬಂದ್ ಗೆ ಬೆಂಬಲ ವ್ಯಕ್ತವಾಗಿದೆ.
ಶೃಂಗೇರಿಯಲ್ಲಿ ಸುಸಜ್ಜಿತ ಆಸ್ಪತ್ರೆಯಿಲ್ಲ. ನೂರು ಹಾಸಿಗೆಗಳ ಆಸ್ಪತ್ರೆ ಬೇಕೆಂಬ ಜನರ ಬೇಡಿಕೆಗೆ ಈವರೆಗೂ ಮನ್ನಣೆ ಸಿಕ್ಕಿಲ್ಲ. ಜಾಗದ ಕೊರತೆಯ ನೆಪವೊಡ್ಡಿ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಲೇ ಬಂದಿದ್ದಾರೆ. ಹಲವು ಬಾರಿ ಒತ್ತಾಯಿಸಿ, ಮನವಿ ಮಾಡಿ ಬೇಸತ್ತಿರುವ ಜನ ಸಂಘಟಿತ ಹೋರಾಟಕ್ಕೆ ಇಳಿದಿದ್ದಾರೆ.