Latest

Leopard: ಆಹಾರ ಹರಸಿ ಕಾಡಿನಿಂದ ನಾಡಿಗೆ ಬಂದ ಚಿರತೆ

ರಾಮನಗರ: ಆಹಾರ ಹರಸಿ ಕಾಡಿನಿಂದ ನಾಡಿಗೆ ಬಂದಿದ್ದ ಚಿರತೆ ಮನೆಯಲ್ಲಿ ಸೆರೆಯಾಗಿದೆ. ಮನೆಯಲ್ಲಿ ಬಂದಿಯಾದ ಚಿರತೆ ಸೆರೆಗೆ ಅರಣ್ಯಾಧಿಕಾರಿಗಳ ತಂಡ ಅಪರೇಷನ್ ಚೀತಾ ನಡೆಸುತ್ತಿದ್ದಾರೆ. ಎಲ್ಲಿ ಗೊತ್ತಾ…!

ಮನೆಯಲ್ಲಿ ಬಂದಿಯಾದ ಚಿರತೆ – ಕಾಡಿನಿಂದ ಆಹಾರ ಹರಸಿ ಬಂದಿದ್ದ ಚಿರತೆ ಮನೆಯಲಿ ಸೆರೆಯಾಗಿದೆ. ರಾಮನಗರ ತಾಲೂಕಿನ ಕೂಟಗಲ್ ಹೋಬಳಿ ಜಾಲಮಂಗಲ ಗ್ರಾಮದಲ್ಲಿ ಚಿರತೆ ಸೆರೆಯಾಗಿದೆ. ಕಳೆದ‌ ರಾತ್ರಿ ಸಮಯದಲ್ಲಿ ಜಾಲಮಂಗಲ ಗ್ರಾಮದ ನಾಗರಾಜು ಹಾಗೂ ರೇವಣ್ಣ ಎಂಬುವವರ ಮನೆಯಲ್ಲಿ ಸೆರೆಯಾಗಿದೆ.

ರಾತ್ರಿ ಸಮಯದಲ್ಲಿ ಮನೆಯಲ್ಲಿದ್ದ ಕುರಿ ಹಾಗೂ ನಾಯಿಯನ್ನ ಹಿಡಿಯಲು ಬಂದಿದ್ದ ಚಿರತೆ ಮನೆಯವರಿಗೆ ಕಾಣಿಕೊಂಡಿದೆ. ಕೂಡಲೆ ಮೆನೆಯಿಂದ ಹೊರ ಬಂದ ಎಲ್ಲರೂ ಚಿರತೆಯನ್ನ ಮನೆಯೊಳಗೆ ಬಂದಿಯನ್ನಾಗಿಸಿದ್ದಾರೆ.

ಕಳೆದೊಂದು ತಿಂಗಳಿಂದ ಚಿರತೆ ಕಾಟದಿಂದ ಗ್ರಾಮದ ಜನರು ನಲುಗಲೇ ಇದ್ದಾರೆ. ಅರಣ್ಯಾಧಿಕಾರಿಗಳಿಗೆ ತಿಳಿಸಿದ್ರು ಯಾವುದೇ ಪ್ರಯೋಜನ‌ ಮಾತ್ರ ಆಗುತ್ತಲೆ ಇರಲಿಲ್ಲ. ಚಿರತೆ ಸೆರೆ ಶಾಶ್ವತ ಪರಿಹಾರ ಹುಡುಕುವಲ್ಲಿ ಅಧಿಕಾರಿಗಳು ಎಡವಿದ್ದರು.

ಈ ಬೆನ್ನಲ್ಲೆ ಮನೆಯ ಒಳಗಡೆಯೇ ಚಿರತೆ ಬಂದಿರುವುದು ಗ್ರಾಮಸ್ಥರನ್ನ ಕಂಗಾಲು ಮಾಡಿದೆ. ಸದ್ಯಕ್ಕೆ ಮನುಷ್ಯರ ಮೇಲೆ ಚಿರತೆ ಬಿದ್ದಿಲ್ಲ. ಒಂದು ವೇಳೆ ಹೆಚ್ಚಿನ ಅನಾಹುತಗಳಾದ್ರೆ ಯಾರು ಹೊಣೆ ಎಂದು ಗ್ರಾಮಸ್ಥರು ಅಧಿಕಾರಿಗಳನ್ನ ಪ್ರಶ್ನಿಸುತ್ತಿದ್ದಾರೆ.

ಈಗಾಗಲೆ ಮನೆಯಲ್ಲಿ ಬಂಧಿಯಾಗಿರುವ ಚಿರತೆ ಸೆರೆಗೆ ಅಪರೇಷನ್ ಚೀತಾ ತಂಡ ರಚನೆ ಮಾಡಿದೆ. ಸ್ಥಳದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಬನ್ನೇರುಘಟ್ಟ ತಜ್ಞ ವೈದ್ಯರಿಂದ ಅರವಳಿಕೆ ಮದ್ದು ನೀಡಿ ಚಿರತೆ ಸೆರೆ ಹಿಡಿಯಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದು, ಗ್ರಾಮಸ್ಥರು ಮನೆಯಿಂದ ಹೊರ ಬರದಂತೆ ತಾಕೀತು ಹೊರಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button