Latest

ಬಿಜೆಪಿಯ ಆಡಳಿತಕ್ಕೆ ಜನರು ಆಕ್ರೋಶಗೊಂಡಿದ್ದಾರೆ: ಡಿ.ಕೆ.ಶಿವಕುಮಾರ್

ಹುಬ್ಬಳ್ಳಿ: ಹಾನಗಲ್ ಉಪ ಚುನಾವಣೆಯಲ್ಲಿ ಜನರು ಬದಲಾವಣೆ ಬಯಸಿದ್ದಾರೆ. ನಮ್ಮ ಅಭ್ಯರ್ಥಿ ಚುನಾವಣೆಯಲ್ಲಿ ಪರಾಭವಗೊಂಡಿದ್ದರೂ ನಿರಂತರವಾಗಿ ಜನರ ಸಂಪರ್ಕದಲ್ಲಿದ್ದಾರೆ. ಕೋವಿಡ್ ಸಮಯದಲ್ಲಿ ಜನರಿಗೆ ಏನೂ ಸಿಕ್ಕಿಲ್ಲ ಎಂದು ಜನರು ಬೇಸರಗೊಂಡಿದ್ದಾರೆ. ಬಿಜೆಪಿಯ ಆಡಳಿತ ವೈಫಲ್ಯದಿಂದ ಜನರು‌ ಆಕ್ರೋಶ ಎದ್ದು ಕಾಣುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದ ಖಾಸಗಿ ಹೋಟೆಲ್​​​​ನಲ್ಲಿ ಪಕ್ಷದ ಸಭೆಗೂ ಮುನ್ನ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜನರು ಬದಲಾವಣೆ ಮಾಡಲು ತೀರ್ಮಾನ ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ಜನರು ಕಷ್ಟ ಅನುಭವಿಸಿದ್ದಾರೆ. ರೈತರು, ವರ್ತಕರು, ಸಂಪ್ರದಾಯ ಬದ್ದವಾಗಿ ಬಂದಿದ್ದ ವೃತ್ತಿ ನಂಬಿದವರು ಸಹ ಸಾಕಷ್ಟು ಕಷ್ಟ ಅನುಭವಿಸಿವಂತಾಗಿದೆ. ಬಿಜೆಪಿ ಆಡಳಿತ ವೈಖರಿಯಿಂದ ಜನ ಬೇಸತ್ತಿದ್ದು, ಇವೆಲ್ಲಾ ಕಾರಣಗಳಿಂದ ಜನರು ಆಕ್ರೋಶ ಕಂಡುಬರುತ್ತಿದೆ. ಅದರ ಫಲಿತಾಂಶ ಚುನಾವಣೆಯ ಮತದಾನದ ಮೂಲಕ ಗೊತ್ತಾಗಲಿದೆ ಎಂದರು.

ಮಾಜಿ ಸಿಎಂ ಬಿಎಸ್‌ವೈ ಆಒ್ತನ ಮನೆ ಮೇಲೆ ಐಟಿ ದಾಳಿ:

ಯಡಿಯೂರಪ್ಪ ಆಪ್ತನ ಮೇಲೆ ಐಟಿ ದಾಳಿ ಕುರಿತು ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪನವರ ಆಪ್ತರೆಂದು ನಾನು ಸರ್ಟಿಫಿಕೇಟ್ ಕೊಡುವುದಿಲ್ಲ. ಐಟಿ ದಾಳಿ ಬಗ್ಗೆ ನನಗೆ ಎಲ್ಲವೂ ಗೊತ್ತಿದೆ. ದಾಳಿ ಪೂರ್ಣಗೊಂಡ ನಂತರ ಎಲ್ಲವೂ ಗೊತ್ತಾಗುತ್ತೆ. ಈ ಬಗ್ಗೆ ನಾನು ಈಗ ಏನು ಮಾತನಾಡುವುದಿಲ್ಲ. ಯಡಿಯೂರಪ್ಪನವರು ಸಿಎಂ ಸ್ಥಾನದಿಂದ ನಿರ್ಗಮಿಸಬೇಕಾದರೆ ಕಣ್ಣೀರು ಹಾಕಿದರು. ಬಿಎಸ್‌ವೈರನ್ನು ಈಗಾಗಲೇ ಬಿಜೆಪಿ ಹೈಕಮಾಂಡ‌ ಹೇಗೆ ನಡೆಸಿಕೊಂಡು ಬಂದಿದೆ ಎಂದು ರಾಜ್ಯದ ಜನರಿಗೆ ಗೊತ್ತಿದೆ. ಅಷ್ಟೇ ಅಲ್ಲದೆ ಯಡಿಯೂರಪ್ಪನವರ ಮಗ ರಾಜ್ಯದ ಉಪಾಧ್ಯಕ್ಷರಿದ್ದರೂ ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಅವರಿಗೆ ಯಾವುದೇ ಉಸ್ತುವಾರಿ ನೀಡಿರಲಿಲ್ಲ. ನಂತರ ಕಾರ್ಯಕರ್ತರು ಪ್ರತಿಭಟನೆ ಮಾಡಿದ ಮೇಲೆ ಅವರನ್ನು ಉಸ್ತುವಾರಿ ಪಟ್ಟಿಯಲ್ಲಿ ಸೇರಿಸಿದ್ದಾರೆ. ಅದು ಅವರ ಪಕ್ಷದ ಆಂತರಿಕ ವಿಚಾರ ನಾನೂ ಏನೂ ಮಾತನಾಡುವುದಿಲ್ಲ ಎಂದು ವ್ಯಂಗ್ಯವಾಡಿದರು.

Related Articles

Leave a Reply

Your email address will not be published.

Back to top button