ಹಾನಗಲ್ ಉಪಚುವಣೆನ ಎಫೆಕ್ಟ್ ಮುಖ್ಯಮಂತ್ರಿಗಳು ತೈಲ ಬೆಲೆ ಇಳಿಸಿದ್ದಾರೆ: ಡಿ ಕೆ ಶಿವಕುಮಾರ್
ಧಾರವಾಡ: ಹಾನಗಲ್ ಉಪಚುಣಾವಣೆಯಲ್ಲಿ ಗೆದ್ದಿದ್ದೇವೆ ಅನಿಸುತ್ತಿಲ್ಲ. ಮತದಾರರ ಬಗ್ಗೆ ನಂಬಿಕೆ ಇತ್ತು. ನಾನು ಭಾಷಣ ಮಾಡುವ ವೇಳೆ ನಾನೇನು ಬೋಧನೆ ಮಾಡಿಲ್ಲ. ನಿಮಗೆ ಸಹಾಯ ಆಗಿದ್ಯಾ ಇಲ್ವಾ, ಆದಾಯ ಹೆಚ್ಚಾಗಿದಿಯಾ ಇಲ್ವಾ ಅಷ್ಟೇ ಕೇಳಿದ್ದು. ಅದಕ್ಕೆ ಈಗ ಜನರೇ ಉತ್ತರ ಕೊಟ್ಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಲಿನ ಉತ್ತರಕ್ಕೆ ಈಗ ಸಿಎಂ ಪೆಟ್ರೋಲ್, ಡೀಸೆಲ್ ಇಳಿಸಿದ್ದಾರೆ. ಇನ್ನು ಹಲವು ದಿನಸಿಗಳ ಬೆಲೆ ಇಳಿಕೆ ಆಗಬೇಕು.
ನಾನು ದೇವರಿಗೆ ಬೇಡಿಕೊಂಡಿದ್ದೆ. ದೇವತೆಗೆ ನನ್ನ ಪ್ರಾರ್ಥನೆಯನ್ನು ಹೇಳಿಕೊಂಡಿದ್ದೆ. ಭಕ್ತನಿಗೂ ದೇವರಿಗೂ ಇರುವ ವ್ಯವಹಾರ ಹೇಳೋಕೆ ಆಗಲ್ಲ,
ವೈಯಕ್ತಿಕವಾಗಿ ದೇವರಲ್ಲಿ ಬೇಡಿದ್ದೆ, ದೇವಿ ಈಗ ವರ ಕೋಟಿದ್ದಾಳೆ ನನಗೆ ಎಂದರು.
ಸಿಂದಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತ್ತಿದ್ದಾರೆ ಅದನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಲ್ಲಿ ಸಿಎಂ ಹೇಳಿಕೆ ವಿಚಾರ ಬಹಳ ಸಂತೋಷ ಅವರ ಹೇಳಿಕೆಗೆ, ಈ ಸೀಟ್ ವಿಶೇಷ ಏನೆಂದ್ರೆ ಜನತಾದಳ ಸೀಟ್ ಅವರು ಗೆದ್ದಿದ್ದಾರೆ. ಬಿಜೆಪಿ ಸೀಟ್ ನಾವು ಗೆದ್ದಿದ್ದೇವೆ. ನಾನು ಇಲ್ಲಿನ ಅಳಿಯ ಅಂತಾ ಹಾನಗಲ್ನಲ್ಲಿ ಹೇಳಿಲ್ಲ. ಎಲ್ಲ ಸಚಿವರನ್ನ ಅವರೇ ಇಲ್ಲಿ ಬಿಟ್ಟಿದ್ದು ನಾನಲ್ಲ. ಹಾನಗಲ್ ಚುನಾವಣೆ ಫಲಿತಾಂಶವೇ ತೈಲ ಬೆಲೆ ಇಳಿಕೆಗೆ ಕಾರಣ ಎಂದು ಕುಟುಕಿದರು.
ಬಿಟ್ ಕಾಯಿನ್ ತನಿಖೆಯ ಕುರಿತು ಸರ್ಕಾರವೇ ಸ್ಪಷ್ಟೀಕರಣ ನೀಡಲಿ:
ಬಿಟ್ ಕಾಯಿನ್ ವಿಚಾರ, ಇಡಿ ಗೆ ಸಿಬಿಐ ಗೆ ಕೊಟ್ಟಿದೀವಿ ಅಂತ ಹೇಳ್ತಾರೆ, ಅವರೇ ಅದರ ಬಗ್ಗೆ ವಿವರಣೆ ಕೊಡಬೇಕು. ನಾನು ಯಾವುದೇ ರಾಜಕಾರಣಿ ಬಗ್ಗೆ ಮಾತಾಡಿಲ್ಲ. ಪ್ರಕರಣ ತನಿಖೆ ಬಗ್ಗೆ ಸಾರ್ವಜನಿಕವಾಗಿ ಜನರಿಗೆ ಸ್ಪಷ್ಟಪಡಿಸಲಿ. ನಾವು ಸಹ ಆರ್ ಟಿ ಐ ಮೂಲಕ ಅರ್ಜಿ ಸಲ್ಲಿಸಲಿದ್ದೇವೆ ಎಂದರು.