Latest

ಡಬಲ್ ಎಂಜಿನ್ ಸರ್ಕಾರ ಇದ್ರೂ, ಮಹದಾಯಿ, ಮೇಕೆದಾಟು ಯೋಜನೆ ಯಾಕೆ ಜಾರಿಯಾಗುತ್ತಿಲ್ಲ: ಡಿಕೆ ಶಿವಕುಮಾರ್

ಧಾರವಾಡ : ರಾಜ್ಯದ ಜನರಿಗೆ ಬಿಜೆಪಿಯವರಿಂದ ಯಾವುದೇ ಕಾರಣಕ್ಕೂ ಒಳ್ಳೆಯದು ಆಗುವುದಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಅವರದೇ ನೇತೃತ್ವದ ಸರ್ಕಾರಗಳು ಆಡಳಿತ ನಡೆಸುತ್ತಿವೆ. ಆದರೂ ಮೇಕೆದಾಟು ಹಾಗೂ ಮಹದಾಯಿ ಯೋಜನೆ ಜಾರಿಗೆ ಸರ್ಕಾರಗಳು ಹಿಂದೇಟು ಹಾಕುತ್ತಿವೆ. ಸಿಎಂ ಬೊಮ್ಮಾಯಿ ಈ ಭಾಗದವರೇ ಇದ್ದಾರೆ, ಯೋಜನೆಗಳು ಶೀಘ್ರವೇ ಜಾರಿಯಾಗುತ್ತವೆ ಅಂದುಕೊಂಡಿದ್ವಿ. ಆದರೆ ಅವರು ಕೂಡ ಧ್ವನಿ ಎತ್ತಿಲ್ಲ ಎಂದು ಸರ್ಕಾರದ ವಿರುದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿಕಾರಿದರು.

ಹುಬ್ಬಳ್ಳಿ ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದಗಳ ಜೊತೆಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದ ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ಮೇಲೆ ಮಹದಾಯಿ ಮತ್ತು ಮೇಕೆದಾಟು ಸಮಸ್ಯೆ ಬಗ್ಗೆ ಹರಿಯುತ್ತೆ ಅಂದುಕೊಂಡಿದ್ವೀ. ಆದರೆ ಬೊಮ್ಮಾಯಿ ಅವರು ಕೇಂದ್ರಕ್ಕೆ ತೆರಳಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತಿಲ್ಲ. ಪ್ರಹ್ಲಾದ್ ಜೋಶಿಯಂತೂ ಅದರ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಆಡಳಿತ ವೈಫಲ್ಯ ಎತ್ತಿ ತೋರಿಸುವುದಕ್ಕೆ ಮತದಾರರಿಗೆ ಉಪಚುನಾವಣೆ ವೇದಿಕೆ:

ಉಪಚುನಾವಣೆಗಳು ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಆಗುವುದಿಲ್ಲ. ಆಡಳಿತ ಬಿಜೆಪಿ ಕೈಯಲ್ಲಿದೆ. ಆಡಳಿತವನ್ನು ಹೇಗೆಲ್ಲ ದುರುಪಯೋಗ ಮಾಡಿಕೊಳ್ಳಬೇಕು ಎಂಬುವುದು ಬಿಜೆಪಿಗೆ ಗೊತ್ತಿದೆ. ಕಳೆದ ಉಪಚುನಾವಣೆಗಳಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡಂತೆ, ಈ ಬಾರಿಯೂ ಅಧಿಕಾರ ಹೇಗೆ ದುರುಪಯೋಗ ಮಾಡಿಕೊಂಡರು ಕೂಡಾ ಮತದಾರರು ತಮ್ಮ ತೀರ್ಪು ಬದಲಾಯಿಸುವದಿಲ್ಲ. ಈ ಸನ್ನಿವೇಶ ಮತದಾರರಿಗೆ ತಮ್ಮ ನೋವನ್ನು ತೊರ್ಪಡಿಸಲು ಹಾಗೂ ಬಿಜೆಪಿ ಆಡಳಿತ ವೈಫಲ್ಯ ಎತ್ತಿ ತೋರಿಸಲು ಉಪ ಚುನಾವಣೆ ಒಂದು ವೇದಿಕೆಯಾಗಿದೆ. ಯಾವುದೇ ಕಾರಣಕ್ಕೂ ಯಾರ ಒತ್ತಡಕ್ಕೂ ಒಳಗಾಗದೆ, ತಮ್ಮ ತೀರ್ಪು ನೀಡ್ತಾರೆ ಎಂಬ ನಂಬಿಕೆ ಇದೆ ಎಂದರು.

ಮುಂಬರುವ ವಿಧಾನಸಭಾ ಚುನಾವಣೆಗೆ ಉಪ ಚುನಾವಣೆ ಪರಿಣಾಮ ಆಗುತ್ತದೆ ಎನ್ನುವ ವಿಚಾರವಾಗಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಅವಧಿ ಇನ್ನೂ ಒಂದೂವರೆ ವರ್ಷ ಇದೆಯಾ ಎಂದು ಡಿಕೆಶಿ‌ ಪ್ರಶ್ನೆ ಮಾಡಿ, ಪರೋಕ್ಷವಾಗಿ ಬಿಜೆಪಿ‌ ಸರ್ಕಾರದ ಬಗ್ಗೆ ವ್ಯಂಗ್ಯವಾಡಿದರು. ಚುನಾವಣೆ ಬಗ್ಗೆ ಬಿಜೆಪಿಯವರನ್ನೇ ಕೇಳಿ. ಬಿಜೆಪಿ ಆಂತರಿಕದ ಬಗ್ಗೆ ಅವರ ನಾಯಕರಿಗೇ ಗೊತ್ತಿದೆ. ಈ ಹಿಂದೆ ಅರುಣ್ ಸಿಂಗ್ ನಮ್ಮ ನಾಯಕರು ಪ್ರಾಮಾಣಿಕರು, ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದಿದ್ದರು. ಆದರೆ ಯತ್ನಾಳ, ಬೆಲ್ಲದ ಅವರು ಪರೀಕ್ಷೆ ಪಾಸ್ ಮಾಡೋಕೆ ಓಡಾಡುತ್ತಿದ್ರು. ಬಿಜೆಪಿಯವರ ಯಾವುದೇ ಮಾತುಗಳಲ್ಲಿಯೂ ನಂಬಿಕೆ ಇಲ್ಲ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳಿದರು.

ಹಾನಗಲ್ ಮತ್ತು ಸಿಂದಗಿ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಕಣಕ್ಕಿಳಿಸಿದ ಜೆಡಿಎಸ್ ಕುರಿತು ಪ್ರತಿಕ್ರಿಯೆ ನೀಡಿ, ಜೆಡಿಎಸ್ ನವರ ರಾಜಕೀಯ ಅನುಭವ, ತಂತ್ರಗಾರಿಕೆ, ಅವರ ಪೊಲಿಟಿಕಲ್ ಸ್ಟೇಟರ್ಜಿ ಅವರಿಗೆ ಬಿಟ್ಟಿದು. ಆದರೆ ಬಗ್ಗೆ ನಾ ಏನೂ ಪ್ರತಿಕ್ರಿಯೆ ನೀಡಲ್ಲ ಮತದಾರರೇ ತೀರ್ಮಾನ ಮಾಡ್ತಾರೆ. ಈ ಹಿಂದೆ ಪಕ್ಷ ಸೂಚಿಸಿತ್ತು ಅಂತಾ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಲು ಶ್ರಮಿಸಿದ್ದೆ. ಅಷ್ಟೇ ಅಲ್ಲದೆ ಕೊರೋನ ಸಮಯದಲ್ಲಿ ಬಿಜೆಪಿ ಪಕ್ಷದವರ ಜೊತೆಗೂಡಿಯು ಕೆಲಸ ಮಾಡಿದ್ದೇವೆ ನಮ್ಮದು ಜಾತ್ಯತೀತ ಪಕ್ಷ ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತೇವೆ ಎಂದರು.

Related Articles

Leave a Reply

Your email address will not be published. Required fields are marked *

Back to top button