Latest

IPL 2021: ಈ ಸಲವೂ ಕಪ್ ನಿಮ್ದೇ ಎಂದು ನಿರ್ಗಮಿಸಿದ ಆರ್​​ಸಿಬಿ

ಶಾರ್ಜಾ : ಕೋಲ್ಕೊತಾ ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಅಂತರದಲ್ಲಿ ಸೋಲನುಭವಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಮ್ಮೆ ಐಪಿಎಲ್ ಕಪ್ ಗೆಲ್ಲುವಲ್ಲಿ ವಿಫಲವಾಗಿದೆ.
ವಿರಾಟ್ ಕೊಹ್ಲಿ ನಾಯಕನಾಗಿ ಕೊನೆಯ ಪಂದ್ಯವನ್ನಾಡಿದರು. ಆದರೆ ಆಟಗಾರನಾಗಿ ಅವರು ಆರ್​ಸಿಬಿಯಲ್ಲೇ ಮುಂದುವರಿಯುವುದಾಗಿ ಹೇಳಿದ್ದಾರೆ.

ಕೆಕೆಆರ್ ಜಯದಲ್ಲಿ ಸುನಿಲ್ ನರೇನ್ ಪ್ರಮುಖ ಪಾತ್ರವಹಿಸಿದರು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬೆಂಗಳೂರು ತಂಡ ಕೇವಲ 138 ರನ್ ಗಳಿಸಿತು. ಸುನಿಲ್ ನರೇನ್ 4 ವಿಕೆಟ್ ಗಳಿಸಿದರಲ್ಲದೆ 15 ಎಸೆತಗಳಲ್ಲಿ 3 ಸಿಕ್ಸರ್ ಮೂಲಕ 26 ರನ್ ಗಳಿಸಿ ನಿರೀಕ್ಷೆಯಂತೆ ಪಂದ್ಯ ಶ್ರೇಷ್ಠರೆನಿಸಿದರು.

ಬೆಂಗಳೂರು ತಂಡದ ಫೀಲ್ಡಿಂಗ್ ವೈಫಲ್ಯ ಸೋಲಿಗೆ ಪ್ರಮುಖ ಕಾರಣವಾಯಿತು. ಅಲ್ಪ ಮೊತ್ತವನ್ನು ಸಮರ್ಥಿಸಿಕೊಳ್ಳುವಲ್ಲಿ ಕೊಹ್ಲಿ ಪಡೆ ಕೊನೆಯ ಓವರ್ ತನಕವೂ ಹೋರಾಟ ನೀಡಿತ್ತು.
ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ ಕೆಕೆಆರ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಫೈನಲ್ ಸ್ಥಾನಕ್ಕಾಗಿ ಹೋರಾಟ ನಡೆಸಲಿವೆ.

Related Articles

Leave a Reply

Your email address will not be published. Required fields are marked *

Back to top button