Latest

ಮಹಿಳೆ ಹೊಟ್ಟೆಯಲ್ಲಿ 4 ಕೆಜಿ ಪೈಬ್ರೈಡ್ ಗಡ್ಡೆ : ಆಪರೇಷನ್ ಮಾಡಿದ ವೈದ್ಯರು

ಕಾರವಾರ : ಮಹಿಳೆಯ ಹೊಟ್ಟೆಯಲ್ಲಿ ಬೆಳೆದಿದ್ದ 4 ಕೆ.ಜಿ.ತೂಕದ ಗಡ್ಡೆಯನ್ನು ಕ್ರೀಮ್ಸ್ ಮೆಡಿಕಲ್ ಕಾಲೇಜಿನ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದು, ಮಹಿಳೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಕುಮಟಾ ಮೂಲದ ಮೀನುಗಾರ ಮಹಿಳೆಗೆ ಕಳೆದ 10 ತಿಂಗಳ ಹಿಂದೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಆಕೆ ಕುಮಟಾ ಆಸ್ಪತ್ರೆಗೆ ತೋರಿಸಿದ್ದರು. ಆಗ ಹೊಟ್ಟೆಯಲ್ಲಿ ಪೈಬ್ರೈಡ್ ಗಡ್ಡೆ ಬೆಳೆದಿರುವುದು ಪತ್ತೆಯಾಗಿದೆ. ಆಕೆಗೆ ಥೈರೈಡ್ ಹಾಗೂ ರಕ್ತ ಹೀನತೆ ಸಮಸ್ಯೆ ಇರುವುದರಿಂದ ಶಸ್ತ್ರಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ತೋರಿಸುವಂತೆ ವೈದ್ಯರು ಸೂಚಿಸಿದ್ದರು. ಪತಿಯನ್ನು ಕಳೆದುಕೊಂಡು ಇಬ್ಬರು ಪುಟ್ಟ ಮಕ್ಕಳನ್ನು ಹೊಂದಿರುವ ಮಹಿಳೆ ಕೊನೆಗೆ ಕುಟುಂಬಸ್ಥರ ನೆರವಿನಿಂದ ಕಾರವಾರದ ಕ್ರೀಮ್ಸ್ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಹಾಗೂ ಕ್ರೀಮ್ಸ್ ಅಧೀಕ್ಷಕ ಶಿವಾನಂದ ಕುಡ್ತಲ್ಕರ್ ಅವರನ್ನು ಭೇಟಿಯಾಗಿ ತೋರಿಸಿದ್ದರು.

ಮಹಿಳೆಯನ್ನು ಪರೀಕ್ಷಿಸಿದ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವ ಬಗ್ಗೆ ಆಕೆಗೆ ತಿಳಿಸಿದ್ದರು. ಅದರಂತೆ ಡಾ.ಸ್ಪಂದನಾ,ಡಾ.ಪರೇಶ,ಡಾ.ಕಿಶನ್,ಡಾ.ಐಶ್ವರ್ಯಾ, ಶುಶ್ರೂಷಕಿ ಮೇಘಾ ಅವರನ್ನೊಳಗೊಂಡ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಗಡ್ಡೆಯನ್ನು ಹೊರಗೆ ತೆಗೆದಿದೆ. ಶಸ್ತ್ರ ಚಿಕಿತ್ಸೆ ನಂತರ ಮಹಿಳೆ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Related Articles

Leave a Reply

Your email address will not be published.

Back to top button