Latest

ಮೈಸೂರು ವಿವಿ ಕೆ-ಸೆಟ್ ಫಲಿತಾಂಶ ನವೆಂಬರ್​ 2 ರಂದು ಪ್ರಕಟ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಕೆ-ಸೆಟ್ ಪರೀಕ್ಷೆ ನಡೆಸಿದ್ದು, ನವೆಂಬರ್​ 2 ರಂದು ಕೆ-ಸೆಟ್ ಫಲಿತಾಂಶ ಪ್ರಕಟವಾಗಲಿದೆ. ಮೈಸೂರು ವಿಶ್ವವಿದ್ಯಾನಿಲಯವು ಜುಲೈ 25 ರಂದು ರಾಜ್ಯಾದ್ಯಂತ ಕೆ-ಸೆಟ್ ಪರೀಕ್ಷೆ ನಡೆಸಿತ್ತು.

ಇದರ ಫಲಿತಾಂಶ ನಾಳೆ (ನವೆಂಬರ್​ 2 ) ಪ್ರಕಟವಾಗಲಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು. ನಾಳೆ ವಿವಿಯ ಕ್ರಾಫರ್ಡ್ ಭವನದ ಅಕಾಡೆಮಿಕ್ ಕೌನ್ಸಿಲ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಫಲಿತಾಂಶದ ವಿವರವನ್ನು ನೀಡಲಿದ್ದಾರೆ.

ನಾಳೆ ಮಧ್ಯಾಹ್ನ 12 ಗಂಟೆ ನಂತರ ಮೈಸೂರು ವಿವಿಯ ವೆಬ್ ಸೈಟ್​ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.

Related Articles

Leave a Reply

Your email address will not be published.

Back to top button