Latest

ಕೇಂದ್ರದಿಂದ ಇಂಧನ‌ ದರ ಕಡಿತ: ತೈಲ ಮಾರಾಟ ತೆರಿಗೆ ಇಳಿಸಿದ ದೇಶದ ಮೊದಲ ರಾಜ್ಯ ಕರ್ನಾಟಕ

ಬೆಂಗಳೂರು: ಪೆಟ್ರೋಲ್ ಹಾಗೂ ಡೀಸಲ್ ದರದಲ್ಲಿ 7. ರೂ. ಇಳಿಕೆ ಮಾಡಿ ಕರ್ನಾಟಕ ಸರ್ಕಾರವು ಇಂದು ಅಧಿಸೂಚನೆ ಹೊರಡಿಸಿದೆ. ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸಲ್ ದರವನ್ನು ಕ್ರಮವಾಗಿ ರೂ 10 ಹಾಗೂ ರೂ 5 ಕ್ಕೆ ಇಳಿಸಿದ ಬೆನ್ನಲ್ಲೇ ಸರ್ಕಾರ ಆದೇಶ ಹೊರಡಿಸಿದೆ.

ಈ ಆದೇಶ ಹೊರ ಬಿದ್ದ ತಕ್ಷವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿಯೂ ತೆರಿಗೆ ಕಡಿಮೆ ಮಾಡುವ ನಿರ್ಧಾರ ಪ್ರಕಟಿಸಿದರು. ಆ ಮೂಲಕ ದೇಶದ ಮೊದಲ ರಾಜ್ಯವಾಗಿ ಇಂಧನ ದರ ಇಳಿಸುವ ನಿರ್ಧಾರ ಮಾಡಿದರು.

ಕೇಂದ್ರ ಸರ್ಕಾರವು ಕಡಿತಗೊಳಿಸಿರುವ ಅಬಕಾರಿ ತೆರಿಗೆಯ ಜೊತೆಯಲ್ಲಿ ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ಮಾರಟ ತೆರಿಗೆಯನ್ನು ಶೇ. 35 ರಿಂದ ಶೇ. 25.9ಕ್ಕೆ ಮತ್ತು ಡೀಸೆಲ್‌ ಮೇಲಿನ ಮಾರಟ ತೆರಿಗೆಯನ್ನು ಶೇ. 24 ರಿಂದ ಶೇ. 14.34ಕ್ಕೆ ಇಳಿಸಿರುತ್ತದೆ. ಇದರಿಂದ ನವೆಂಬರ್​ 3 ರಂದು ಇದ್ದ ಪೆಟ್ರೋಲಿನ ಚಿಲ್ಲರೆ ಮಾರಾಟ ದರವು ರೂ 113.93 ರಿಂದ ರೂ 100.63 ಕ್ಕೆ ಬರಲಿದ್ದು, ಒಟ್ಟಾರೆ ದರ ಕಡಿತ ರೂ 13.30 ಆಗಲಿದೆ. ಹಾಗೂ ನವೆಂಬರ್ 3 ರಂದು ಇದ್ದ ಡೀಸೆಲ್‌ ನ ಚಿಲ್ಲರೆ ಮಾರಾಟ ದರವು ರೂ 104.50 ರಿಂದ ರೂ 85.03 ಕ್ಕೆ ಬರಲಿದ್ದು, ಒಟ್ಟಾರೆ ದರ ಕಡಿತ ರೂ 19.47 ಆಗಲಿದೆ.

Related Articles

Leave a Reply

Your email address will not be published.

Back to top button