Latest

Syed Mushtaq Ali Trophy: ಮುಂಬೈಗೆ ಸೋಲಿಣಿಸಿದ ಕರ್ನಾಟಕ

ಗುವಾಹಟಿ : ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡ ಮುಂಬೈ ವಿರುದ್ಧ 9 ರನ್ ಅಂತರದಲ್ಲಿ ಜಯ ಗಳಿಸಿ‌ ಶುಭಾರಂಭ ಕಂಡಿದೆ.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ. ಕರ್ನಾಟಕ ನಾಯಕ ಮನೀಶ್ ಪಾಂಡೆ (84) ಮತ್ತು ಕರುಣ್ ನಾಯರ್ (72) ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು. 167 ರನ್ ಜಯದ ಗುರಿ ಹೊತ್ತ ಮುಂಬೈ ನಾಯಕ ಅಜಿಂಕ್ಯ ರಹಾನೆ ಅವರು ಜವಾಬ್ದಾರಿಯುತ 75 ರನ್ ಗಳಿಸಿದರೂ ಕರ್ನಾಟಕದ ವಿರುದ್ಧ ಗೆಲ್ಲಲಾಗಲಿಲ್ಲ. ಮುಂಬೈ 6 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಕರ್ನಾಟಕದ ಪರ ಕೆ.ಸಿ. ಕಾರ್ಯಪ್ಪ (26ಕ್ಕೆ 3) ಮತ್ತು ಕೆ. ಗೌತಮ್ (26ಕ್ಕೆ 2) ಉತ್ತಮ ಬೌಲಿಂಗ್ ಪ್ರದರ್ಶಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.

Related Articles

Leave a Reply

Your email address will not be published.

Back to top button