Latest

ಮಕ್ಕಳಿಗೆ ಸೇರಬೇಕಾದ ಹಾಲಿನಪುಡಿ ಅಕ್ರಮ ಸಾಗಾಟ: ಲಾರಿ ವಶಕ್ಕೆ ಪಡೆದ ಪೊಲೀಸರು

ಕಲಬುರಗಿ: ಮಕ್ಕಳಿಗೆ ಸೇರಬೇಕಿದ್ದ ಕ್ಷೀರಭಾಗ್ಯ ಹಾಲಿನ ಪುಡಿ ಅಕ್ರಮವಾಗಿ ಹೊರರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜೇರಟಗಿ ಬಳಿ ಸುಮಾರು ಒಂದು ಸಾವಿರ ಕಿಲೋ ಹಾಲಿನ ಪುಡಿ ಪಾಕೇಟ್ ಗಳು ಅಕ್ರಮ ಸಾಗಾಟದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಲಾರಿ ವಶಕ್ಕೆ ಮಾಡಿದ್ದಾರೆ.

ಜೇವರ್ಗಿಯಿಂದ ವಿಜಯಪುರ ಮಾರ್ಗವಾಗಿ ನೆರೆ ರಾಜ್ಯ ಗಳಿಗೆ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬರುವ ಮುನ್ಸುಚನೆ ಅರಿತ ಚಾಲಕ ಮತ್ತು ಕ್ಲೀನರ್ ಲಾರಿ ಬಿಟ್ಟು ಪರಾರಿಯಾಗಿದ್ದಾರೆ.

ಆದ್ರೆ ಯಾರು ಸಾಗಾಟ ಮಾಡುತ್ತಿದ್ದರು ಅನ್ನೋದು ಇನ್ನು ಪತ್ತೆಯಾಗಿಲ್ಲಾ. ಸದ್ಯ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭಿಸಿದ್ದಾರೆ.

Related Articles

Leave a Reply

Your email address will not be published.

Back to top button