Latest

Jayachamaraja Wodeyar Statue: ಮುರಿದುಬಿದ್ದ ಜಯಚಾಮರಾಜ ಒಡೆಯರ್ ಖಡ್ಗ

ಮೈಸೂರು: ನಿನ್ನೆ ಜಂಬೂ ಸವಾರಿ ವೀಕ್ಷಣೆಗೆ ಜನರು ಮುಗಿಬಿದ್ದ ಹಿನ್ನೆಲೆ ಜಯಚಾಮರಾಜ ಒಡೆಯರ್‌ ಅವರ ಪ್ರತಿಮೆಯಲ್ಲಿದ್ದ ಖಡ್ಗ ಮುರಿದು ಬಿದ್ದಿದೆ. ನಿನ್ನೆ ಜಂಬೂ ಸವಾರಿ ವೀಕ್ಷಣೆಗೆ ಜನರು ಕಿಕ್ಕಿರಿದು ತುಂಬಿದ್ದರು.

ಆ ವೇಳೆ ಅರಮನೆಯ ಉತ್ತರ ದಿಕ್ಕಿನಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರಲ್ಲಿ ಜನಸ್ತೋಮ ನೆರೆದಿತ್ತು. ಈ ವೇಳೆ ಜಯಚಾಮರಾಜ ಒಡೆಯರ್ ಅವರ ಅಮೃತ ಶಿಲೆಯಲ್ಲಿ ನಿರ್ಮಾಣವಾಗಿರೋ ಪ್ರತಿಮೆಯ ಖಡ್ಗ ಮುರಿದಿದೆ.

ಪ್ರತಿಮೆ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನಸ್ತೋಮ ನೆರೆದಿತ್ತು. ಮೈಸೂರಿನ ಜಯಚಾಮರಾಜ ಒಡೆಯರ್ ಸರ್ಕಲ್ ನಲ್ಲಿದ್ದ ಪ್ರತಿಮೆಯ ಖಡ್ಗ ಮುರಿದಿದೆ. ಜನರನ್ನು ನಿಯಂತ್ರಿಸಲು ಪೋಲಿಸರು ಹರಸಾಹಸ ಪಟ್ಟಿದ್ದರು ಭದ್ರತಾ ಸಿಬ್ಬಂದಿ ಕೂಡ ಜನ್ರನ್ನ ನಿಯಂತ್ರಿಸಲು ಪರದಾಡಿದ್ದರು.

ದಸರಾ ಸಡಗರದ ಹಿನ್ನೆಲೆ ಲೈಟಿಂಗ್, ಹೂವಿನ ಪಾಟ್ ಗಳನ್ನು ಸಿಂಗಾರಗೊಳಿಸಲಾಗಿತ್ತು. ಈ ಹೂವಿನ ಪಾಟ್ ಗಳನ್ನೂ ಹೊಡೆದು ಹಾಕಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button