Latest
ಧಾರವಾಡ: ಡಿ ಕೆ ಶಿವಕುಮಾರ್ ಆಪ್ತ, ಉದ್ಯಮಿ ಯು ಬಿ ಶೆಟ್ಟಿ ಮನೆ ಮೇಲೆ ಐಟಿ ದಾಳಿ
ಧಾರವಾಡ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಪ್ತರಾದ ಯು.ಬಿ.ಶೆಟ್ಟಿ ಅವರ ಮನೆ ಮೇಲೆ ಇಂದು ಬೆಳ್ಳಂಬೆಳಿಗ್ಗೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಗೋವಾದಿಂದ ಧಾರವಾಡಕ್ಕೆ ಬಂದಿರುವ ಐದು ಜನ ಐಟಿ ಅಧಿಕಾರಿಗಳನ್ನು ಒಳಗೊಂಡಿರುವ ತಂಡ ಶೆಟ್ಟಿ ಅವರಿಗೆ ಶಾಕ್ ನೀಡಿದ್ದಾರೆ. ಯು.ಬಿ.ಶೆಟ್ಟಿ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದವರಾಗಿದ್ದಾರೆ.
ಧಾರವಾಡದ ದಾಸನಕೊಪ್ಪ ಸರ್ಕಲ್ ಬಳಿ ಶೆಟ್ಟಿ ಅವರು ಐಷಾರಾಮಿ ಮನೆ ಹೊಂದಿದ್ದಾರೆ. ಶೆಟ್ಟಿ ಅವರು ಬೆಂಗಳೂರು, ಬೈಂದೂರು, ಕಲಬುರ್ಗಿ ಮತ್ತು ಇತರ ಕಡೆಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ ಎಂದು ತಿಳಿದಿ ಬಂದಿದ್ದು, ಮುಂಜಾನೆಯಿಂದಲ್ಲೇ ಐಟಿ ಅಧಿಕಾರಿಗಳು ಶೆಟ್ಟಿಯವರ ಮನೆಯಲ್ಲಿ ದಾಖಲಾತಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.