Latest

IPL 2022: ಐಪಿಎಲ್ ತಂಡ ಖರೀದಿಸಲಿದ್ದಾರೆ ಮ್ಯಾಂಚೆಸ್ಟರ್‌ ಯುನೈಟೆಡ್ ಮಾಲೀಕರು…?

ಲಂಡನ್ : ಫುಟ್ಬಾಲ್ ಜಗತ್ತಿನ ಶ್ರೀಮಂತ ಕ್ಲಬ್ ಗಳಲ್ಲಿ ಒಂದಾಗಿರುವ ಮ್ಯಾಂಚೆಸ್ಟರ್‌ ಯುನೈಟೆಡ್ ನ ಮಾಲೀಕರಾದ ಗ್ಲಾಝರ್ ಕುಡುಂಬ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ತಂಡವೊಂದನ್ನು ಖರೀದಿಸಲಿದೆ ಎಂದು ವರದಿಯಾಗಿದೆ.

2022ರ ಋತುವಿನಲ್ಲಿ ಐಪಿಎಲ್ ನಲ್ಲಿ 10 ತಂಗಳಿದ್ದು ಎರಡು ಹೊಸ ತಂಡ ಸೇರ್ಪಡೆಯಾಗಲಿವೆ. ಈ ಬಗ್ಗೆ ಬಿಸಿಸಿಐ ಈಗಾಗಲೇ ಟೆಂಡರ್ ಆಹ್ವಾನಿಸಿದೆ. ಇಂಗ್ಲಿಷ್ ಪ್ರೀಮಿಯರ್ ಲೀಗ್ ನ ತಂಡ ಮ್ಯಾಂಚೆಸ್ಟರ್‌ ಯುನೈಟೆಡ್ ಅ. 26 ರಂದು ಯುಎಇನಲ್ಲಿ ಬಿಡ್ ಸಲ್ಲಿಸಲಿದೆ.

ಮ್ಯಾಂಚೆಸ್ಟರ್ ಯುನೈಟೆಡ್‌ ಫುಟ್ಬಾಲ್ ತಂಡದ ಪರ ಜಗತ್ತಿನ ಶ್ರೇಷ್ಠ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೋ ಆಡುತ್ತಿದ್ದು ಈ ಸಂಬಂಧ ಭಾರತದಲ್ಲಿ ಫುಟ್ಬಾಲ್ ಅಭಿವೃದ್ಧಿಗೂ ಪೂರಕವಾಗಲಿದೆ.
ವರ್ಷಕ್ಕೆ 3000ಕೋಟಿ ರೂ. ವ್ಯವಹಾರ ನಡೆಸುವ ಕಂಪೆನಿ ಅಥವಾ ವೈಯಕ್ತಿಕವಾಗಿ 2,500 ಕೋಟಿ ಆಸ್ತಿ ಹೊಂದೊರುವರು ಬಿಡ್ ಸಲ್ಲಿಸಬಹುದು.

ಭಾರತದಲ್ಲಿ ಆದಾನಿ ಗ್ರೂಪ್, ಟೊರೆಂಟ್‌ ಫಾರ್ಮಾ, ಅರಬಿಂದೋ ಫಾರ್ಮಾ, ಆರ್ಪಿ ಸಂಜೀವ್ ಗೊಯೆಂಕಾ ಗ್ರೂಪ್, ಹಿಂದೂಸ್ತಾನ್ ಟೈಮ್ಸ್ ಮೀಡಿಯಾ, ಜಿಂದಾಲ್ ಸ್ಟೀಲ್, ರೊನ್ನಿ ಸ್ಕ್ರಿವ್ವಾಲಾ ತಂಡ ಖರೀದಿಸುವ ಆಸಕ್ತಿ ಹೊಂದಿದ್ದಾರೆಂದು ತಿಳಿದು ಬಂದಿಗೆ.

Related Articles

Leave a Reply

Your email address will not be published.

Back to top button