Latest
IPL 2021: ಪ್ಲೇ ಆಫ್ ಗೆ ರಾಯಲ್ ಚಾಲೆಂಜರ್ಸ್
ಶಾರ್ಜಾ : ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ ಅಂತರದಲ್ಲಿ ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ನ ಪ್ಲೇ ಆಫ್ ಹಂತ ತಲುಪಿದೆ.
165 ರನ್ ಜಯದ ಗುರಿ ಹೊತ್ತ ಪಂಜಾಬ್ ತಂಡ ಯಜುವೇಂದ್ರ ಚಹಾಲ್ ಅವರ ಸ್ಪಿನ್ ದಾಳಿಗೆ ಸಿಲುಕಿ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆರ್ಸಿಬಿ ಪರ ಗ್ಲೆನ್ ಮ್ಯಾಕ್ಸ್ವೆಲ್ (57) ಮತ್ತು ದೇವದತ್ತ ಪಡಿಕ್ಕಲ್ (40) ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ 164 ರನ್ ಗಳ ಸವಾಲಿನ ಮೊತ್ತ ಕಲೆಹಾಕಿತು.
165 ರನ್ ಜಯದ ಗುರಿಹೊತ್ತ ಪಂಜಾಬ್ ಪರ ಮಯಾಂಕ್ ಅಗರ್ವಾಲ್ (57) ಮತ್ತು ಕೆ.ಎಲ್.ರಾಹುಲ್ (39) ಉತ್ತಮ ಆರಂಭ ಕಲ್ಪಿಸಿದ್ದರು. ಆದರೆ ಶಹಬಾಜ್ ನದೀಮ್ ಬೌಲಿಂಗ್ ನಲ್ಲಿ ರಾಹುಲ್ ವಿಕೆಟ್ ನೆಲಕ್ಕುರುಳಿದಾಗ ಪಂಜಾಬ್ ನ ಸೋಲಿನ ಹೆಜ್ಜೆ ಆರಂಭವಾಯಿತು. ಯಜುವೇಂದ್ರ ಚಹಾಲ್ 29ರನ್ ಗೆ 3 ವಿಕೆಟ್ ಗಳಿಸಿ ಪಂಜಾಬ್ ತಂಡವನ್ನು ಪ್ಲೇ ಆಫ್ ಸ್ಪರ್ಧೆಯಿಂದ ಹೊರಗಟ್ಟಿದರು. ಮ್ಯಾಕ್ಸ್ವೆಲ್ ಪಂದ್ಯಶ್ರೇಷ್ಠರೆನಿಸಿದರು.