Chris Gayle: ಐಪಿಎಲ್ ಉಳಿದ ಪಂದ್ಯಗಳಿಂದ ಕ್ರಿಸ್ ಗೇಲ್ ಔಟ್
ದುಬೈ: ಕೊರೊನಾ ಸುರಕ್ಷತೆಗಾಗಿ ನಡೆಸುವ ಬಯೋ ಬಬಲ್ ನ ಬಳಲಿಕೆಯನ್ನು ತಪ್ಪಿಸಿಕೊಂಡು ಟಿ20 ವಿಶ್ವಕಪ್ ಗಾಗಿ ಸಜ್ಜಾಗಲು ಕ್ರಿಸ್ ಗೇಲ್ ಇಂಡಿಯನ್ ಪ್ರೀಮಿಯರ್ ಲೀಗ್ ನ ಉಳಿದ ಪಂದ್ಯಗಳನ್ನು ಆಡದಿರಲು ತೀರ್ಮಾನಿಸಿದ್ದಾರೆ. ಇದರಿಂದ ಪಂಜಾಬ್ ಕಿಂಗ್ಸ್ ತಂಡಕ್ಕೆ ಬಹಳ ನಷ್ಟವಾಗಿದೆ ಎಂದು ಹೇಳಲಾಗದು ಏಕೆಂದರೆ ಕ್ರಿಸ್ ಗೇಲ್ ಅವರಲ್ಲಿ ಮೊದಲಿದ್ದ ಬ್ಯಾಟಿಂಗ್ ಅಬ್ಬರ ಈಗ ಕಾಣುತ್ತಿಲ್ಲ.
42 ವರ್ಷದ ಗೇಲ್ ಅವರ ನಿರ್ಗಮನದಿಂದ ಪಂಜಾಬ್ ತಂಡವನ್ನು ತೊರೆದ ವಿದೇಶಿ ಆಟಗಾರರ ಸಂಖ್ಯೆ ನಾಲ್ಕಕ್ಕೇರಿದೆ. ಕ್ರಿಸ್ ಗೇಲ್ ಟಿ20 ವಿಶ್ವಕಪ್ ನಲ್ಲಿ ವಿಂಡೀಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ. 2021ರ ಋತುವಿನಲ್ಲಿ ಗೇಲ್ ಪಂಜಾಬ್ ತಂಡದ ಪರ 10 ಪಂದ್ಯಗಳನ್ನು ಆಡಿದ್ದು, ಗಳಿಸಿದ್ದು ಕೇವಲ 193ರನ್. ತಮಗೆ ಮಾನಸಿಕ ವಿಶ್ರಾಂತಿಯ ಅಗತ್ಯ ಇದೆ ಎಂದಿದ್ದಾರೆ.
ಕಳೆದ ಕೆಲವು ತಿಂಗಳಿಂದ ಸಿಡಬ್ಲ್ಯುಐ ಬಬಲ್, ಸಿಪಿಎಲ್ ಬಬಲ್ ಮತ್ತು ಐಪಿಎಲ್ ಬಬಲ್ ಗೆ ಒಳಗಾಗಿರುವೆ ಹೀಗಾಗಿ ಮನಸ್ಸಿಗೆ ವಿಶ್ರಾಂತಿಯ ಅಗತ್ಯ ಇದೆ. ನನ್ನ ನಿಲುವಿಗರ ಬೆಂಬಲ ನೀಡಿದ ಪಂಜಾಬ್ ತಂಡದ ಎಲ್ಲ ಆಡಳಿತ ಮಂಡಳಿಗೆ ನಾನು ಚಿರ ಋಣಿ” ಎಂದು ಗೇಲ್ ಹೇಳಿದ್ದಾರೆ.