ILPL 2021: ಚೆನ್ನೈಗೆ ಸೋಲುಣಿಸಿ ಅಗ್ರ ಸ್ಥಾನಕ್ಕೇರಿದ ಡೆಲ್ಲಿ
ದುಬೈ: ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 3 ವಿಜೆಟ್ ಅಂತರದಲ್ಲಿ ಜಯ ಗಳಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ಅಂಕ ಪಟ್ಟಿಯಲ್ಲಿ ಮತ್ತೆ ಅಗ್ರ ಸ್ಥಾನಕ್ಕೇರಿದೆ.
ಚೆನ್ನೈ ನೀಡಿದ 137 ರನ್ ಅಲ್ಪ ಮೊತ್ತವನ್ನು ಗುರಿತಲುಪಲು ಡೆಲ್ಲಿ ಒಂದು ಹಂತದಲ್ಲಿ ಸಂಕಷ್ಟ ಎದುರಿಸಿತ್ತು, ಆದರೆ ಚೆನ್ನೈ ಪರ ಬದಲಿ ಆಟಗಾರನಾಗಿ ಬಂದ ಗೌತಮ್ ಕೃಷ್ಣಪ್ಪ ಕೈ ಚೆಲ್ಲಿದ ಕ್ಯಾಚ್ ಪಂದ್ಯದ ಗತಿಯನ್ನೇ ಬದಲಾಯಿಸಿತು. ಡೆಲ್ಲಿಯ ಹಿಟ್ಮಾಯರ್ 17 ರನ್ ಗಳಿಸಿ ಆಡುತ್ತಿದ್ದಾಗ ಗೌತಮ್ ಕ್ಯಾಚ್ ಕೈ ಚಲ್ಲಿದರು. ನಂತರ ಹಿಟ್ಮಾಯರ್ ಅಜೇಯ 28 ರನ್ ಗಳಿಸುವುದರೊಂದಿಗೆ ಇನ್ನೂ ಎರಡು ಎಸೆತ ಬಾಕಿ ಇರುವಾಗ ಡೆಲ್ಲಿ ಜಯದ ಗುರಿ ತಲುಪಿತು.
ಟಾಸ್ ಗೆದ್ದ ಡೆಲ್ಲಿ ಫೀಲ್ಡಿಂಗ್ ಆಯ್ದುಕೊಂಡು ಚೆನ್ನೈ ತಂಡವನ್ನು 136 ರನ್ ಗೆ ಕಟ್ಟಿ ಹಾಕಿತು. ಅಂಬಾಟಿ ರಾಯುಡು 55 ರನ್ ಗಳಿಸಿದ್ದನ್ನು ಹೊರತುಪಡಿಸಿದರೆ ಉಳಿದ ಆಟಗಾರರು ಡೆಲ್ಲಿಯ ಬೌಲಿಂಗ್ ದಾಳಿ ಎದುರಿಸುವಲ್ಲಿ ವಿಫಲರಾದರು. 18 ರನ್ ಗೆ 2 ವಿಕೆಟ್ ಗಳಿಸಿದ ಅಕ್ಸರ್ ಪಟೇಲ್ ಪಂದ್ಯಶ್ರೇಷ್ಠರೆನಿಸಿದರು.