FIH Award: ಭಾರತದ ಆರು ಆಟಗಾರರಿಗೆ ಎಫ್ಐಎಚ್ ವಾರ್ಷಿಕ ಪ್ರಶಸ್ತಿ
ಹೊಸದಿಲ್ಲಿ : ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್ಐಎಚ್) ನೀಡುವ ವಾರ್ಷಿಕ ಪ್ರಶಸ್ತಿಯಲ್ಲಿ ಭಾತರದ ಆರು ಆಟಗಾರರು ಮತ್ತು ಇಬ್ಬರು ತರಬೇತುದಾರರಿಗೆ ವಾರ್ಷಿಕ ಶ್ರೇಷ್ಠ ಪ್ರಶಸ್ತಿ ಲಭಿಸಿದೆ. ಶಿಫಾರಸುಗೊಂಡ ಎಲ್ಲರಿಗೂ ಪ್ರಶಸ್ತಿ ಲಭಿಸಿರುವುದು ವಿಶೇಷ. ಭಾರತದ ಡ್ರ್ಯಾಗ್ ಫ್ಲಿಕರ್ ಹರ್ಮನ್ ಪ್ರೀತ್ ಸಿಂಗ್ ‘ಎಫ್ಐಎಚ್ ವರ್ಷದ ಆಟಗಾರ’ ಗೌರವಕ್ಕೆ ಪಾತ್ರರಾಗಿದ್ದಾರೆ.
ಮಹಿಳಾ ಹಾಕಿತಂಡದ ಡ್ರ್ಯಾಗ್ ಫ್ಲಿಕರ್ ಗುರ್ಜಿತ್ ಕೌರ್ ಕೂಡ ‘ಎಫ್ಐಎಚ್ ವರ್ಷದ ಆಟಗಾರ್ತಿ’ ಗೌರವಕ್ಕೆ ಪಾತ್ರರಾದರು. ಭಾರತದ ಶ್ರೇಷ್ಠ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ವರ್ಷದ ಗೋಲ್ ಕೀಪರ್ ಗೌರವಕ್ಕೆ ಪಾತ್ರರಾದರು.
ಮಹಿಳಾ ತಂಡದ ಗೋಲ್ ಕೀಪರ್ ಸವಿತಾ ಕೂಡ ವರ್ಷದ ಗೋಲ್ ಕೀಪರ್ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಎಫ್ಐಎಚ್ ವರ್ಷದ ಉದಯೋನ್ಮುಖ ಆಟಗಾರ ಗೌರವಕ್ಕೆ ವಿವೇಕ್ ಸಾಗರ್ ಪ್ರಸಾದ್ ಆಯ್ಕೆಯಾಗಿದ್ದಾರೆ. ವಿವೇಕ್ ಸತತ ಎರಡನೇ ಬಾರಿಗೆ ಈ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಮಜಿಳಾ ವಿಭಾಗದ ಉದಯೋನ್ಮುಖ ಆಟಗಾರ್ತಿ ಗೌರವಕ್ಕೆ ಭಾರತದ ಶರ್ಮಿಳಾ ದೇವಿ ಆಯ್ಕೆಯಾಗಿದ್ದಾರೆ.
ಎಫ್ಐಎಚ್ ವರ್ಷದ ಶ್ರೇಷ್ಠ ತರಬೇತುದಾರ ಗೌರವಕ್ಕೆ ಪುರುಷರ ತಂಡದ ಕೋಚ್ ಗ್ರಹಾಂ ರೇಡ್ ಮತ್ತು ಮಹಿಳಾ ತಂಡದ ಕೋಚ್ ಜೋರ್ಡ್ ಮರಿಜ್ನೆ ಪಾತ್ರರಾಗಿದ್ದಾರೆ.