Latestಇತರ ಕ್ರೀಡೆ

Indian Hockey Team: ಕಾಮನ್‌ವೆಲ್ತ್ ಗೇಮ್ಸ್ ನಿಂದ ಹಿಂದೆ ಸರಿದ ಭಾರತ ಹಾಕಿ ತಂಡ

ಹೊಸದಿಲ್ಲಿ : ಮುಂದಿನ ವರ್ಷ ಇಂಗ್ಲೆಂಡ್ ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹಾಕಿ ಇಂಡಿಯಾ ಸಂಘಟಕರಿಗೆ ತಿಳಿಸಿದೆ.

ಇಂಗ್ಲೆಂಡ್ ನಲ್ಲಿರುವ ಕೊವಿಡ್ ಸ್ಥಿತಿ ಹಾಗೂ ಭಾರತ ತಂಡಕ್ಕೆ ವಿಶೇಷವಾಗಿ ಹತ್ತು ದಿನಗಳ ಕ್ವಾರಂಟೈನ್ ಇರುವುದು ಸ್ಪರ್ಧೆಯಿಂದ ಹಿಂದೆ ಸರಿಯಲು ಕಾರಣ ಎಂದು ಹಾಕಿ ಇಂಡಿಯಾ ತಿಳಿಸಿದೆ. ಏಷ್ಯನ್ ಗೇಮ್ಸ್ ನಲ್ಲಿ ಪಾಲ್ಗೊಂಡು ಪ್ಯಾರಿಸ್ ಒಲಂಪಿಕ್ಸ್ ಗೆ ಅರ್ಹತೆ ಪಡೆಯುವುದು ಮುಖ್ಯ ಉದ್ದೇಶವಾಗಿದೆ. ಈ ಕಾರಣಕ್ಕಾಗಿ ಸ್ಪರ್ಧೆಯಿಂದ ಹಿಂದೆ ಸರಿಯಲು ಮುಖ್ಯ ಕಾರಣ ಎನ್ನಲಾಗಿದೆ.

2022 ಜುಲೈ 28 ರಿಂದ ಆಗಸ್ಟ್ 28ರ ವರೆಗೆ ಕಾಮನ್ವೆಲ್ತ್ ಕ್ರೀಡಾಕೂಟ ನಡೆಯಲಿದೆ. ಅದಾದ 32 ದಿನಗಳಲ್ಲಿ ಚೀನಾದಲ್ಲಿ ಏಷ್ಯನ್ ಗೇಮ್ಸ್ ನಡೆಯಲಿದೆ. ಇದರಿಂದಾಗಿ ಭಾರತ ಹಾಕಿ ತಂಡಕ್ಕೆ ವಿರಾಮ ಸಿಗುವುದಿಲ್ಲ. ಕಾಮನ್‌ವೆಲ್ತ್ ಗಿಂತ ಏಷ್ಯನ್ ಗೇಮ್ಸ್ ಪ್ರಮುಖವಾಗಿರುವುದರಿಂದ ನಾವು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷ ನರೆಂದರ್ ಬಾತ್ರಾ ಹೇಳಿದ್ದಾರೆ.

Related Articles

Leave a Reply

Your email address will not be published.

Back to top button