Latest

Deepak Chahar: ದೀಪಕ್ ಚಹಾರ್ ಕ್ಲೀನ್ ಬೌಲ್ಡ್!!!

ದುಬೈ: ಅಂಗಣದಲ್ಲೇ ಪ್ರೀತಿಯ ರಿಂಗಣ….. ಚೆನ್ನೈ ಸೂಪರ್ ಕಿಂಗ್ಸ್ ಕೇವಲ 134 ರನ್ ಗಳಿಸಿತು….ಪಂಜಾಬ್ ಇನ್ನೂ 7 ಓವರ್ ಬಾಕಿ ಇರುವಾಗಲೇ ಗುರಿ ತಲುಪಿತು…..ಕೆ.ಎಲ್. ರಾಹುಲ್ ಸಿಡಿಲಬ್ಬರದ 98* ರನ್ ಗಳಿಸಿದರು…..ದೀಪಕ್ ಚಹಾರ್ 4 ಓವರ್ ಗಳಲ್ಲಿ 48 ರನ್ ನೀಡಿದರು….ಈ ಪಂದ್ಯದಲ್ಲಿ ಇದಾವುದೂ ಹೆಚ್ಚು ಕಾಲ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಉಳಿಯಲೇ ಇಲ್ಲ….ಕಾರಣ ಆ ನಂತರ ನಡೆದ ಅವಿಸ್ಮರಣೀಯ ಘಟನೆ ಎಲ್ಲವನ್ನೂ ಮರೆಮಾಚಿಸಿತು.

ದೀಪಕ್ ಚಹಾರ್ ತನ್ನ ಪ್ರೇಯಸಿ ಜಯ ಬಾರಧ್ವಾಜ್ ಅವರೊಂದಿಗೆ ಬದುಕಿನ ಹೊಸ ಇನ್ನಿಂಗ್ಸ್ ಆರಂಭಿಸಲು ಕ್ರೀಡಾಂಗಣದಲ್ಲೇ ಪ್ರಪೋಸಲ್ ಮಾಡಿದ್ದು ಕ್ರಿಕೆಟ್ ಜಗತ್ತನ್ನು ಆಕರ್ಷಿಸಿತು.
ಎಲ್ಲಿಯೂ ಸುದ್ದಿಯಾಗದ ಈ ಜೋಡಿ ಇದ್ದಕ್ಕಿದ್ದಂತೆ ಹೊಸ ಬದುಕಿಗೆ ಮುನ್ನುಡಿ ಬರೆದದ್ದು, ಚೆನ್ನೈ ಸೂಪರ್ ಕಿಂಗ್ಸ್ ನ ಸೋಲನ್ನು ಮರೆಸಿತು.

ಈಗ ತಿಳಿಯಿತೇ ಆ ಉತ್ತಮ ಬೌಲರ್ ಗಡಿಬಿಡಿಯಲ್ಲಿ‌ 48 ರನ್ ಯಾಕೆ ನೀಡಿದ ಎಂದು?. ಇಬ್ಬರೂ ಉಂಗುರ ಬದಲಾಯಿಸಿಕೊಂಡರು….ಸದ್ಯದಲ್ಲೇ ಮದುವೆಯಂತೆ…

Related Articles

Leave a Reply

Your email address will not be published. Required fields are marked *

Back to top button