Latestಇತರ ಕ್ರೀಡೆ
SAFF Championship 2021: ಪಿಲೆ ದಾಖಲೆ ಮುರಿದ ಛೆಟ್ರಿ: ಫೈನಲ್ ಗೆ ಭಾರತ
ಮಾಲೆ, ಮಾಲ್ಡೀವ್ಸ್: ನಾಯಕ ಸುನೀಲ್ ಛೆಟ್ರಿ ದ್ವಿತೀಯಾರ್ಧದಲ್ಲಿ ಗಳಿಸಿದ ಎರಡು ಗೋಲುಗಳ ನೆರವಿನಿಂದ ಮಾಲ್ಡೀವ್ಸ್ ತಂಡವನ್ನು 3-1 ಗೋಲುಗಳ ಅಂತರದಲ್ಲಿ ಮಣಿಸಿದ ಭಾರತ ತಂಡ ಸೌತ್ ಏಷ್ಯನ್ ಫುಟ್ಬಾಲ್ ಫೆಡರೇಷನ್ (ಸ್ಯಾಫ್) ಫುಟ್ಬಾಲ್ ಚಾಂಪಿಯನ್ಷಿಪ್ ನ ಫೈನಲ್ ತಲುಪಿದೆ.
ಈ ಪಂದ್ಯದಲ್ಲಿ ಸುನೀಲ್ ಛೆಟ್ರಿ ಎರಡು ಗೋಲುಗಳನ್ನು ಗಳಿಸುವ ಮೂಲಕ ಬ್ರೆಜಿಲ್ ನ ದಂತಕತೆ ಪಿಲೆ (77 ಗೋಲುಗಳು) ದಾಖಲೆಯನ್ನು ಮುರಿದರು. ಛೆಟ್ರಿಯ ಒಟ್ಡು ಗೋಲು ಗಳಿಕೆ ಈಗ 79.
ಫೈನಲ್ ಪಂದ್ಯದಲ್ಲಿ ಭಾರತ ತಂಡ ನೇಪಾಳ ವಿರುದ್ಧ ಸೆಣಸಲಿದೆ.
ಭಾರತದ ಪರ ಮನ್ವೀರ್ ಸಿಂಗ್ (33ನೇ ನಿಮಿಷ) ಗೋಲು ಗಳಿಸಿ ಮುನ್ನಡೆ ಕಲ್ಪಿಸಿದರು. ಆದರೆ ಮಾಲ್ಡೀವ್ಸ್ ಪರ ಆಲಿ ಅಶ್ಫಕ್ ಪೆನಾಲ್ಟಿ ಮೂಲಕ 45 ನೇ ನಿಮಿಷದಲ್ಲಿ ಗಳಿಸಿದ ಗೋಲು ಪಂದ್ಯವನ್ನು ಪ್ರಥಮಾರ್ಧದಲ್ಲಿ ಸಮಬಲಗೊಳಿಸಿತು. ಆದರೆ ದ್ವಿತಿಯಾರ್ಧದಲ್ಲಿ ಸುನೀಲ್ ಛೆಟ್ರಿ (62 ಮತ್ತು 71ನೇ ನಿಮಿಷ) ಗಳಿಸಿದ ಎರಡು ಗೋಲು ಭಾತರದ ಫೈನಲ್ ಸ್ಥಾನವನ್ನು ಭದ್ರಪಡಿಸಿತು