Latest

ಕೋವಿಡ್ ನಷ್ಟ ಪರಿಣಾಮ; ರೈತರಿಗಿಂತಲೂ ಹೆಚ್ಚು ಉದ್ಯಮಿಗಳು ಆತ್ಮಹತ್ಯೆ

ನವದೆಹಲಿ: ಕಳೆದ 2020ರಲ್ಲಿ ಕೋವಿಡ್ ಲಾಕ್​ಡೌನ್​​​​​ ಸಂದರ್ಭದಲ್ಲಿ ಸ್ತಬ್ದವಾಗಿ ಎಲ್ಲಾ ವಲಯಗಳಲ್ಲಿ ತೀವ್ರ ನಷ್ಟ ಉಂಟಾಗಿದ್ದು, ದೇಶದಲ್ಲಿ ರೈತರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕದ ವರದಿಯ ಪ್ರಕಾರ 2020ರಲ್ಲಿ 11,716 ಉದ್ಯಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. 10677 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಉದ್ಯಮಿಗಳ ಸಂಖ್ಯೆಗಿಂತ 1039 ರಷ್ಟು ಕಡಿಮೆಯಿದೆ. ಕೃಷಿ ಕ್ಷೇತ್ರಕ್ಕಿಂತ ಕೃಷಿಯೇತರ ಕ್ಷೇತ್ರಕ್ಕೆ ಹೆಚ್ಚಿನ ಹಾನಿ ಉಂಟುಮಾಡಿತ್ತು ಎನ್ನುವುದು ತಜ್ಞರು ಅಭಿಪ್ರಾಯಿಸಿದ್ದಾರೆ.

ಕಳೆದ 2019ರಲ್ಲಿ 9052 ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು ಇದಕ್ಕೆ ಹೋಲಿಸಿದರೆ 2020ರಲ್ಲಿ ಶೇ.29ರಷ್ಟು ಹೆಚ್ಚಾಗಿದೆ. ಹೆಚ್ಚಿನವರು ಪುರುಷರು (ಶೇ.93) ಆಗಿದ್ದಾರೆ. ಶೇ.36 ಬೀದಿ ವ್ಯಾಪಾರಸ್ಥರು ಹಾಗೂ ಶ್ರೀಮಂತ ವರ್ಗದ ಶೇ.37 ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ.

Related Articles

Leave a Reply

Your email address will not be published.

Back to top button