Latest

T20 World CUP: ಸತತ ಎರಡನೇ ಜಯ ದಾಖಲಿಸಿದ ಆಸೀಸ್

ದುಬೈ: ಶ್ರೀಲಂಕಾ ತಂಡವನ್ನು 7 ವಿಕೆಟ್ ಅಂತರದಲ್ಲಿ ಮಣಿಸಿದ ಆಸ್ಟ್ರೇಲಿಯಾದ ತಂಡ ಟಿ20 ವಿಶ್ವಕಪ್ ನಲ್ಲಿ ಸತತ ಎರಡನೇ ಜಯ ದಾಖಲಿಸಿದೆ. ನಿರಂತರ ವೈಫಲ್ಯ ಕಾಣುತ್ತಿದ್ದ ಡೇವಿಡ್ ವಾರ್ನರ್ (65) ಬ್ಯಾಟಿಂಗ್ ನಲ್ಲಿ ಲಯ ಕಂಡುಕೊಂಡಿದ್ದು ಆಸೀಸ್ ತಂಡದ ಜಯದ ಸಂಭ್ರಮಕ್ಕೆ ಮತ್ತೊಂದು ಕಾರಣವಾಯಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ತಂಡ ಲಂಕಾ ಪಡೆಯನ್ನು 154 ರನ್ ಗೆ ಕಟ್ಟಿ ಹಾಕಿತು. ಕುಸಲ್ ಪೆರೆರಾ (35) ಚರಿತ್ ಅಸಲಂಕಾ (35) ಮತ್ತು ಭಾನುಕ ರಾಜಪಕ್ಸೆ (33) ತಂಡದ ಸಾಧಾರಣ ಮೊತ್ತಕ್ಕೆ ನೆರವಾದರು. 155 ರನ್ ಗಳ ಜಯದ ಗುರಿಯನ್ನು ಬೆಂಬತ್ತಿದ ಆಸ್ಟ್ರೇಲಿಯಾ ತಂಡಕ್ಕೆ ನಾಯಕ ಆ್ಯರೋನ್ ಫಿಂಚ್ (37) ಡೇವಿಡ್ ವಾರ್ನರ್ (65) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಪರಿಣಾಮ ಇನ್ನೂ ಮೂರು ಓವರ್ ಬಾಕಿ ಇರುವಾಗಲೇ ಜಯದ ಗುರಿ ತಲುಪಿತು.

4 ಓವರ್ ಗಳಲ್ಲಿ 12 ರನ್ ಗೆ 2 ವಿಕೆಟ್ ಗಳಿಸಿದ ಆ್ಯಡಂ ಜಾಂಪಾ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಐಪಿಎಲ್ ಸೇರಿದಂತೆ ಇತರ ಪಂದ್ಯಗಳಲ್ಲಿ ನಿರಂತರ ವೈಫಲ್ಯ ಕಾಣುತ್ತಿದ್ದ ಡೇವಿಡ್ ವಾರ್ನರ್ ಬ್ಯಾಟಿಂಗ್ ನಲ್ಲಿ ಲಯ ಕಂಡಿದ್ದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

Related Articles

Leave a Reply

Your email address will not be published.

Back to top button