Latest
ಎಂಇಎಸ್ ತನ್ನ ಕಿಡಿಗೇಡಿ ಕೃತ್ಯಗಳಿಂದಲೇ ಮೂಲೆಗುಂಪಾಗಿದೆ: ಗೃಹ ಸಚಿವ ಅರಗ ಜ್ಞಾನೇಂದ್ರ
ಚಿಕ್ಕಮಗಳೂರು: ಬೆಳಗಾವಿಯಲ್ಲಿ ಎಂಇಎಸ್ ಅವಹೇಳನಕಾರಿ ಪೋಸ್ಟ್ ಹಾಕಿ, ಕಿಡಿಗೇಡಿತನ ಪ್ರದರ್ಶಿಸಿರುವುದನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಖಂಡಿಸಿದರು.
ನಗರಲ್ಲಿ ಅವರು ಪ್ರತಿಕ್ರಿಯಿಸಿ, ಎಂಇಎಸ್ ಗೆ ಅದೇ ಜೀವಾಳ, ಪದೇ-ಪದೇ ಅಂತಹ ಕೆಲಸ ಮಾಡುತ್ತಿದ್ದಾರೆ. ಹಾಗೇ ಮಾಡಿಯೇ ಅದು ಮೂಲೆಗುಂಪಾಗಿದೆ, ಅದು ಮಹಾರಾಷ್ಟ್ರದಲ್ಲೂ ಇಲ್ಲ ಎಂದು ಹರಿಹಾಯ್ದರು.
ಭಾಷೆ ಬಗ್ಗೆ ಭಾವೋದ್ವೇಗ ಉಂಟುಮಾಡಿ ಚುನಾವಣೆ ಗೆಲ್ಲಬಹುದು, ರಾಜಕಾರಣ ಮಾಡಬಹುದು ಎಂದು ಭಾವಿಸಿದ್ದಾರೆ. ಆದರೆ ಜನ ಎಚ್ಚೆತ್ತಿದ್ದಾರೆ. ಎಂಇಎಸ್ ಗೆ ಇತಿಶ್ರೀ ಹಾಡಿದ್ದಾರೆ. ಬೆಳಗಾವಿ ಕಾರ್ಪೋರೇಷನ್ ಬಿಜೆಗೆ ಹಿಡಿತಕ್ಕೆ ಬಂದಿದೆ ಎಂದರು.
ಐದಾರು ದಿನದಲ್ಲಿ ಪುನೀತ್ ಸಮಾಧಿಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಕುಟುಂಬದ ಎಲ್ಲಾ ವಿಧಿ-ವಿಧಾನವೂ ಮುಗಿಯುವವರೆಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಅಭಿಮಾನಿಗಳು ಮುಗಿ ಬೀಳುತ್ತಾರೆ. ಮಣ್ಣನ್ನೂ ಎತ್ತಿಕೊಂಡು ಹೋಗುತ್ತಾರೆ. ಐದಾರು ದಿನದಲ್ಲಿ ಕುಟುಂಬದವರನ್ನು ಕೇಳಿ, ಬೇಲಿ ಹಾಕಿ ಆಮೇಲೆ ಕಳಿಸುತ್ತೇವೆ ಎಂದರು.