Latest
ಸಿದ್ದರಾಮಯ್ಯ ಭೇಟಿಯಾದ ನೂತನ ಶಾಸಕ ಶ್ರೀನಿವಾಸ ಮಾನೆ
ಬೆಂಗಳೂರು : ಹಾನಗಲ್ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಯಗಳಿಸಿರುವ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರು ಇಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾದರು.
ಇದೇ ವೇಳೆ ಸಿದ್ದರಾಮಯ್ಯ ಅವರು ಮಾನೆ ಅವರನ್ನು ಅಭಿನಂದಿಸಿ ಶುಭ ಹಾರೈಸಿದರು. ಎಂಎಲ್ಸಿ ಪ್ರಕಾಶ್ ರಾಠೋಡ ಹಾಗೂ ಶಾಸಕ ರಿಜ್ವಾನ್ ಅರ್ಷಾದ್ ಉಪಸ್ಥಿತರಿದ್ದರು