Latest

ಹಾನಗಲ್‌ ಉಪ ಚುನಾಣೆಯಲ್ಲಿ ಬಿಜೆಪಿ ಸೋಲುತ್ತದೆ: ಸಿದ್ದರಾಮಯ್ಯ

ಧಾರವಾಡ: ಬಿಜೆಪಿಯವರಿಗೆ ಚುನಾವಣೆಯಲ್ಲಿ ಜನರಿಗೆ ಹೇಳುವುದಕ್ಕೆ ಏನು ಇಲ್ಲ. ಅವರು ಅಭಿವೃದ್ಧಿ ಮಾಡಿದ್ದರೆ ಹೇಳುತ್ತಿದ್ದರು. ಆದರೆ ಅವರು ಕಳೆದ ಎರಡು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಹಾಗಾಗಿ ಹಾನಗಲ್‌ನಲ್ಲಿ ಬಿಜೆಪಿ ಗೆಲ್ಲವುದಿಲ್ಲ. ಬಿಜೆಪಿ ಸುಳ್ಳು ಹೇಳಿ ಪ್ರಚಾರ ಮಾಡುತ್ತಿದ್ದೆ. ನಮ್ಮಗೆ ಇರುವ ಮಾಹಿತಿ ಪ್ರಕಾರ ಬಿಜೆಪಿ ದುಡ್ಡು ಖರ್ಚು ಮಾಡಿ ಚುನಾವಣೆ ಗೆಲ್ಲಲು ಹೊರಟಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜಿಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

ಹಾನಗಲ್ ಉಪಚುನಾವಣೆ ಪ್ರಚಾರಕ್ಕೆ ತೆರಳಲು ಮುನ್ನ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭಿವೃದ್ಧಿ ಮೇಲೆ ಮತ ನೀಡಿ ಅಂತಿದ್ದಾರೆ. ಅವರ ಮಾಡಿದ ಅಭಿವೃದ್ಧಿಯ ಪಟ್ಟಿ ಮಾಡಿ ಹೇಳಲಿ, ನಾನು ಸಿಎಂ ಆದ ಮೇಲೆ ಹಾವೇರಿಗೆ ಏನೂ ಕೊಟ್ಟಿದ್ದೇನೆ ಅಂತಾ ಮನೋಹರ್ ತಹಶಿಲ್ದಾರರನ್ನು ಕೇಳಲಿ, ನಾನು 2400 ಕೋಟಿ ಕೊಟ್ಟಿದ್ದೇನೆ. ಸಿಎಂ ಬೊಮ್ಮಾಯಿ ಸುಳ್ಳು ಹೇಳಿ ಪ್ರಚಾರ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಕಾಂಗ್ರೆಸ್ ಜಾತಿ ಧರ್ಮಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂಬ ಸಿಎಂ ಬೊಮ್ಮಾಯಿ ಹೇಳಿಕೆ ಪ್ರತಿಕ್ರಿಯೆ ನೀಡಿದ ಅವರು, ನಮಗೆ ಅದು ಗೊತ್ತಿಲ್ಲ, ಅವರ ಬಳಿ ಮುಸ್ಲಿಂ ಮಂತ್ರಿ ಇದ್ದಾರಾ? ಮುಸ್ಲಿಂರನ್ನು ಯಾಕೆ ಸಚಿವರನ್ನಾಗಿ ಮಾಡಲಿಲ್ಲ‌ ? ಸಂವಿಧಾನ ಬದಲಾವಣೆ ಮಾಡತ್ತೇವೆ ಅಂದವರು ಯಾರು? ನಾವು ಅಧಿಕಾರಕ್ಕೆ ಬಂದಿರೋದೆ ಸಂವಿಧಾನ ಬದಲಾವಣೆ ಮಾಡೋಕ್ಕೆ ಅಂದವರು ಅವರೇ ಅಲ್ವಾ, ಅದು ಅಧಿಕೃತ ಆಯ್ತು, ಮುರಗೇಶ ನಿರಾಣಿ, ಬಸವರಾಜ ಬೊಮ್ಮಾಯಿ ಅವರಿಗೆ ಹಾನಗಲ್ ನಲ್ಲಿ ಬಿಜೆಪಿ ಸೋಲುತ್ತೆ ಎಂದು ಗೊತ್ತಿದೆ. ಯಡಿಯೂರಪ್ಪ ಬಂದ ಮೇಲೆ ಅಲೆ ಎದ್ದಿದ್ದೇಯಾ? ಬೊಮ್ಮಾಯಿ ಬಂದಾಗ ಅಲೆ ಇರಲಿಲ್ವಾ ಎಂದು ವ್ಯಂಗ್ಯವಾಡಿದರು.

ಜನರು ಹೇಳುತ್ತಿದ್ದಾರೆ. ಅವರಿಗೆ ಅಭಿವೃದ್ಧಿ ಬಗ್ಗೆ ಹೇಳಲು ಏನೂ ಇಲ್ಲ. ದುಡ್ಡು ಖರ್ಚು‌ ಮಾಡುತ್ತಿದ್ದಾರೆ. ದುಡ್ಡು ಹಂಚಿಕೆ ಬಗ್ಗೆ ಆಯೋಗಕ್ಕೆ ದೂರು ನೀಡುವುದನ್ನು ಅವರ ಬಳಿ ಹೇಳಿಸಿಕೊಂಡು ಮಾಡಬೇಕಾಗಿಲ್ಲ, ಅದನ್ನು ನಾವೂ ಮಾಡತ್ತೇವೆ. ಕೋವಿಡ್ ಲಸಿಕೆ ಅಭಿಯಾನ ನೂರು ಕೋಟಿ ಮುಟ್ಟಿದೆ ಎಂದು ಬಿಜೆಪಿಯವರು ಸಂಭ್ರಮ ಮಾಡುತ್ತಿದ್ದಾರೆ. 42 ಕೋಟಿ ಮಾತ್ರ ಮೊದಲ ಡೋಸ್, 29 ಕೋಟಿ ಎರಡನೇ ಡೋಸ್ ಲಸಿಕೆ ನೀಡಿದ್ದಾರೆ. ಸತ್ತವರ ಸಂಖ್ಯೆ ಎಷ್ಟು? ಎಂದು ಪ್ರಶ್ನೆ ಮಾಡಿದ ಅವರು 50 ಲಕ್ಷ ಜನ ಸಾವನಪ್ಪಿದ್ದಾರೆ. ಆಕ್ಸಿಜನ್ ಬೆಡ್, ಔಷಧಿ ಕೊಡದೇ ಇರುವುದಕ್ಕೆ 50 ಲಕ್ಷ ಜನರು ಸತ್ತಿದ್ದಾರೆ ಎಂದರು.

Related Articles

Leave a Reply

Your email address will not be published. Required fields are marked *

Back to top button