Latest

ನನ್ನ ತಂಟೆಗೆ ಬರದೆ ಇದ್ರೆ ನಾನ್ಯಾಕೆ ಅವರ ತಂಟೆಗೆ ಹೋಗಲಿ?: ಸಿದ್ದರಾಮಯ್ಯಗೆ ಹೆಚ್‌ಡಿಕೆ ತೀರುಗೇಟು

ಕಲಬುರಗಿ: ಕುಮಾರಸ್ವಾಮಿ ಕಾಲ್ ಕೆರೆದುಕೊಂಡು ಜಗಳಕ್ಕೆ ಬರ್ತಾರೆ ಅನ್ನೋ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಕಲಬುರಗಿ ಏರ್‌ಪೋರ್ಟ್‌ನಲ್ಲಿ ಪ್ರತಿಕ್ರಿಯೇ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ, ಕಾಲ್ ಕೆರೆದುಕೊಂಡು ಬರೋಕೆ ನನಗೆ ಬೇರೆ ಕೆಲಸ ಇಲ್ವಾ? ಅವರು ನನ್ನ ಸುದ್ದಿಗೆ ಬರದೆ ಇದ್ರೆ ನಾನ್ಯಾಕೆ ಅವರ ತಂಟೆಗೆ ಹೋಗುತ್ತೇನೆ ಎಂದು ಸಿದ್ದರಾಮಯ್ಯಗೆ ಹೆಚ್‌ಡಿಕೆ ತೀರುಗೇಟು ನೀಡಿದ್ದಾರೆ.

ನಾವು ಕಾಂಗ್ರೆಸ್ ನಾಯಕರ ತರ ವೈಯಕ್ತಿಕವಾಗಿ ಚರ್ಚೆಮಾಡಿ ಮತ ಪಡೆಯೋ ಅವಶ್ಯಕತೆ ಇಲ್ಲ. ನಮ್ಮ ಅಭಿವೃದ್ಧಿಕಾರ್ಯ ಹೇಳಿಕೊಂಡು ಮತ ಪಡೆಯುತ್ತೇವೆ. ಆದ್ರೆ ಸಿದ್ದರಾಮಯ್ಯ ನಮ್ಮ ತಂಟೆಗೆ ಬಂದಿದ್ದಾರೆ. ಪ್ರಾರಂಭ ಅವರು ಮಾಡ್ತಾರೆ ಅಂತಿಮ ನಾನು ಮಾಡುವ ಪ್ರಸಂಗ ತರ್ತಾರೆ. ಅವರೇ ನಮ್ಮ ತಂಟೆಗೆ ಬರದಿದ್ರೆ ನಾನ್ಯಾಕೆ ಅವರ ತಂಟೆಗೆ ಹೋಗುತ್ತೇನೆ ಅಂತ ಟಾಂಗ್ ಕೊಟ್ಟರು.

ಪುಟ್ಟಗೋಸಿ ವಿಚಾರ:

‘ವಿರೋಧ ಪಕ್ಷದ ಸ್ಥಾನ ಪುಟ್ಟಗೋಸಿ’ ಎಂಬ ಪದ ಬಳಕೆ ಮಾಡಿದ ಕುಮಾರಸ್ವಾಮಿ ಸ್ಪಷ್ಟಣೆ ನೀಡಿದ್ದು, ವಿರೋಧ ಪಕ್ಷದ ಸ್ಥಾನಕ್ಕೆ ನಾನು ಗೌರವ ಕೊಡುತ್ತೇನೆ. ಆದ್ರೆ ಆ ಸ್ಥಾನದಲ್ಲಿರುವ ಸಿದ್ದರಾಮಯ್ಯ ನಡವಳಿಕೆ ಬಗ್ಗೆ ನಾನು ಮಾತಾಡಿದ್ದೇನೆ ಅಷ್ಟೆ ಎಂದರು.

ಇನ್ನು ಕಾಂಗ್ರೆಸ್- ಬಿಜೆಪಿ ಎರಡು ಪಕ್ಷಗಳೂ ಪರ್ಸೆಂಟೆಸ್ ತೊಗೊಳೊದ್ರಲ್ಲಿ ಮುಂದಿದ್ದಾರೆ. ಈ ರಾಜ್ಯದಲ್ಲಿ ಎರಡು ಪಕ್ಷಗಳನ್ನು ತೆಗೆದುಹಾಕಲು ರಾಜ್ಯದ ಜನತೆ ಮನಸ್ಸು ಮಾಡಬೇಕಿದೆ. ಎರಡು ಪಕ್ಷಗಳು ಜನತೆಯ ದುಡ್ಡನ್ನು ಲೂಟಿ ಹೊಡೆಯುತ್ತಿವೆ ಎಂದು ಕುಟುಕಿದ ಎಚ್‌ಡಿಕೆ, ಜಮೀರ್ ಅಹ್ಮದ ಹೇಳಿಕೆ ಕುರಿತಾಗಿ ಪ್ರತಿಕ್ರಿಯೇ ನೀಡಲು ನಿರಾಕರಿಸಿದರು. ಜಮೀರ್ ಬಗ್ಗೆ ನಾನು ಚರ್ಚೆ ಮಾಡೋಲ್ಲ ದೇವರಿದ್ದಾನೆ ನೊಡಿಕೊಳ್ಳುತ್ತಾನೆ ಎಂದರು. ಇನ್ನು ಸಿಂದಗಿಯಲ್ಲಿ ಜೆಡಿಎಸ್- ಬಿಜೆಪಿ ಮದ್ಯೆ ಹೋರಾಟ ಇದೆ. ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ ಎಂದು ಹೆಚ್‌ಡಿಕೆ ಹೇಳಿದರು.

Related Articles

Leave a Reply

Your email address will not be published.

Back to top button