Latest

Global Hunger Index 2021: ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತಕ್ಕೆ 101ನೇ ಸ್ಥಾನ

ನವದೆಹಲಿ: ಜಾಗತಿಕ ಹಸಿವು ಸೂಚ್ಯಂಕ 2021ರ ಗ್ಲೋಬಲ್ ಹಂಗರ್ ಇಂಡೆಕ್ಸ್ ಪಟ್ಟಿಯಲ್ಲಿ ಜಗತ್ತಿನ 116 ರಾಷ್ಟ್ರಗಳ ಸಾಲಿನಲ್ಲಿ ಭಾರತ 94 ರಿಂದ 101ನೇ ಸ್ಥಾನಕ್ಕೆ ಕುಸಿದಿದ್ದು, ನೆರೆಯ ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶ ಗಳಿಗಿಂತಲೂ ಕೆಳಗಿನ ಸ್ಥಾನದಲ್ಲಿದೆ.

ಚೀನಾ, ಬ್ರೆಜಿಲ್ ಮತ್ತು ಕುವೈತ್ ಸೇರಿದಂತೆ 18 ರಾಷ್ಟ್ರಗಳು ಐದಕ್ಕಿಂತ ಕಡಿಮೆ ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿವೆ. ಎಂದು ಗ್ಲೋಬಲ್ ಹಂಗರ್ ಇಂಡೆಕ್ಸ್ ( ಜಿಹೆಚ್ ಐ) ವೆಬ್ ಸೈಟ್ ಹೇಳಿದೆ.

ಜರ್ಮನಿಯ ವೆಲ್ಟ್ ಹಂಗರ್ ಹಿಲ್ಫೆ ಸಂಸ್ಥೆ ಮತ್ತು ಐರಿಶ್ ನ ಕನ್ಸರ್ನ್ ವರ್ಲ್ಡ್ ವೈಡ್ ಸಂಸ್ಥೆ ಜಂಟಿಯಾಗಿ ಸಮೀಕ್ಷೆ ನಡೆಸಿ ತಯಾರಿಸಿದ ವರದಿಯಂತೆ ಭಾರತದಲ್ಲಿ ಹಸಿವಿನ ಮಟ್ಟ ‘ಆತಂಕಕಾರಿ’ ಎಂದು ಹೇಳಲಾಗಿದೆ. 

ಭಾರತದ ಜಾಗತಿಕ ಹಸಿವು ಸೂಚ್ಯಂಕ ಸ್ಕೋರ್ 2012 ಮತ್ತು 2021 ರ ನಡುವೆ ಶೇ 28.5 ರಿಂದ ಶೇ. 27.5ಕ್ಕೆ ಕುಸಿದಿದೆ. ಕಳೆದ ವರ್ಷ 107 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 94 ನೇ ಸ್ಥಾನದಲ್ಲಿತ್ತು. ಇದೀಗ 116 ರಾಷ್ಟ್ರಗಳ ಪಟ್ಟಿಯಲ್ಲಿ 101ನೇ ಸ್ಥಾನಕ್ಕೆ ಕುಸಿದಿದೆ.  

ಪಾಕಿಸ್ತಾನ ಈ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತಕ್ಕಿಂತ ಮೇಲಿನ ಸ್ಥಾನದಲ್ಲಿದೆ. ಪಾಕಿಸ್ತಾನ 92ನೇ ಸ್ಥಾನದಲಿದ್ದರೆ, ನೇಪಾಳ (76) ಬಾಂಗ್ಲಾದೇಶ (76) ಮತ್ತು ಮಾನ್ಮಾರ್ 71ನೇ ಸ್ಥಾನದಲ್ಲಿದೆ. ಅಂದರೆ, ಈ ರಾಷ್ಟ್ರಗಳಲ್ಲಿ ಭಾರತಕ್ಕಿಂತ ಕಡಿಮೆ ಪ್ರಮಾಣದ ಹಸಿವಿನ ಸಮಸ್ಯೆಯಿದೆ. 

Related Articles

Leave a Reply

Your email address will not be published. Required fields are marked *

Back to top button