Latest

ಯಾರೇ ಆಗಲಿ ವೈಯಕ್ತಿಕ ತೇಜೋವಧೆ ಮಾಡುವುದು ಸರಿಯಲ್ಲ: ಮಾಜಿ ಸಚಿವ ಸಿ ಪಿ ಯೋಗೇಶ್ವರ್​​

ರಾಮನಗರ: ಯಾರೇ ಆಗಲಿ ವೈಯಕ್ತಿಕ ತೇಜೋವಧೆ ಸರಿಯಲ್ಲ. ರಾಜಕೀಯವಾಗಿ ಮಾತನಾಡಲಿ ಆದ್ರೆ, ವೈಯಕ್ತಿಕವಾಗಿ ಯಾರನ್ನ ತೇಜೋವದನೆಯಾಗಿ ಮಾತನಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಈ ಭಾರಿ ಸಿಂದಗಿ – ಹಾನಗಲ್ ನಲ್ಲಿ ಬಿಜೆಪಿ ಗೆಲ್ಲುತ್ತದೆ, ನನಗೆ ಈ ಬಗ್ಗೆ ಮಾಹಿತಿ ಇದೆ. ಆದ್ರೆ ಚುನಾವಣಾ ಪ್ರಚಾರ ಭರಾಟೆಯಲ್ಲಿ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡುವುದು ತಪ್ಪು. ಚುನಾವಣಾ ಬಿರುಸಿನಲ್ಲಿ ಆಯ ತಪ್ಪಿ, ಅಳತೆ ತಪ್ಪಿ ಮಾತನಾಡಿದ್ದಾರೆ. ಆದರೆ ಅದು ತಪ್ಪು ಎಂದರು.

ಒಬ್ಬರನ್ನೊಬ್ಬರು ತೇಜೋವಧೆ ಮಾಡೋದು ಸರಿಯಲ್ಲ ಎಂದು ಬಿಜೆಪಿ ನಾಯಕರ ವೈಯಕ್ತಿಕ ಹೇಳಿಕೆಗೆ ಸಿ ಪಿ ಯೋಗೇಶ್ವರ್​​ ಕೂಡ ವಿರೋಧ ವ್ಯಕ್ತಪಡಿಸಿದರು.

ಇನ್ನು RSS ವಿರುದ್ಧ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡದ ಅವರು, ನಾನು RSS ವಿಚಾರವಾಗಿ ಮಾತನಾಡಲ್ಲ, ಬೇರೆಯವರು ಮಾತನಾಡ್ತಾರೆ. ಅದರಲ್ಲೂ ಕುಮಾರಸ್ವಾಮಿ ಬಹಳ ಸ್ಪೀಡ್ ನಲ್ಲಿ ಮಾತನಾಡುತ್ತಿದ್ದಾರೆ, ಆದರೆ ಯಾಕೆ ಅಂತಾ ಗೊತ್ತಿಲ್ಲ ಎಂದರು.

ಇನ್ನು ಸರ್ಕಾರಿ ಬಂಗಲೆ ನಮ್ಮ ಸ್ವಂತದಲ್ಲ, ಹಾಗಾಗಿ ಖಾಲಿ ಮಾಡಿದ್ದೇನೆ. ಮುಂದೆ ಸಚಿವ ಸ್ಥಾನ ಸಿಗುವ ಬಗ್ಗೆ ಗೊತ್ತಿಲ್ಲ ಎಂದು ಇದೇ ವೇಳೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ.

Related Articles

Leave a Reply

Your email address will not be published.

Back to top button