Latest

ಕೇಂದ್ರ ಸರಕಾರ ಮನಸ್ಸು ಮಾಡಿದರೆ 45 ರೂಪಾಯಿಗೆ ಪೆಟ್ರೋಲ್ ನೀಡಬಹುದು: ವೀರಪ್ಪ ಮೋಯ್ಲಿ

ಉದುಪಿ: ಕೇಂದ್ರ ಸರಕಾರ ಮನಸ್ಸು ಮಾಡಿದರೆ 45 ರೂಪಾಯಿಗೆ ಪೆಟ್ರೋಲ್ ನೀಡಬಹುದು. ನಾವು ಅಧಿಕಾರದಲ್ಲಿದ್ದರೆ ಲೀಟರ್ ಗೆ ಇಷ್ಟೊಂದು ದುಬಾರಿ ದರ ಇರುತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೀರಪ್ಪ ಮೊಯಿಲಿ , ಕಳೆದ ಆರೇಳು ವರ್ಷಗಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ವಿಪರೀತ ಹೆಚ್ಚುತ್ತಿದೆ. ನಾವಿರುವಾಗ 350 – 400 ಇದ್ದ ಸಿಲಿಂಡರ್ ಬೆಲೆ ಈಗ ಸಾವಿರ ಹತ್ತಿರ ಬಂದಿದೆ. ಅದೂ ಅಲ್ಲದೆ ಯುಪಿಎ ಸರಕಾರ ಇದ್ದಾಗ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ ಹೆಚ್ಚಿನ ದರ ಆಗ ಇತ್ತು. ಈಗ ತೈಲ ದರ ಕಡಿಮೆ ಇದ್ದರೂ ಕೇಂದ್ರ ಸರಕಾರ ಜನರಿಂದ ಕೋಟ್ಯಂತರ ತೆರಿಗೆ ಹಣ ವಸೂಲಿ ಮಾಡುತ್ತಿದೆ ಎಂದರು.

ಗಾಂಧಿ ನಡಿಗೆ ಕಾರ್ಯಕ್ರಮ:

ಕಾಂಗ್ರೆಸ್ ಪಕ್ಷವನ್ನು ತಳ ಮಟ್ಟದಿಂದ ಗಟ್ಟಿಗೊಳಿಸಲು, ಬೂತ್ ಮಟ್ಟದಲ್ಲಿ ಹೋಬಳಿ ಮಟ್ಟದಲ್ಲಿ ಬಲಪಡಿಸಲು ಗಾಂಧಿ ನಡಿಗೆ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ನನ್ನ ಕ್ಷೇತ್ರ ಚಿಕ್ಕಬಳ್ಳಾಪುರದಲ್ಲಿ ಅದು ಈಗಾಗಲೇ ನಡೆದಿದ್ದು ನವೆಂಬರ್ ನಲ್ಲಿ ಎಲ್ಲ ಕ್ಷೇತ್ರದಲ್ಲಿ ಈ ಕಾರ್ಯಕ್ರಮವನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.

Related Articles

Leave a Reply

Your email address will not be published.

Back to top button