Latest

ನನ್ನದು ತೆರದ ಪುಸ್ತಕ, ಇನ್ನೊಬ್ಬರ ರೀತಿ ಕದ್ದು ಮುಚ್ಚಿ ಮಾಡಿಲ್ಲಾ: ಕುಮಾರಸ್ವಾಮಿ

ವಿಜಯಪುರ: ನಮ್ಮ ಪಕ್ಷದ ಬೆಳವಣಿಗೆ ಎರಡು ಪಕ್ಷಗಳಿಗೆ ಸಹಿಸಲು ಆಗ್ತಿಲ್ಲಾ. ಮುಂದಿನ ವಿಧಾನಸಭೆ ಚುನಾವಣೆ ಕಾರ್ಯಾಗಾರದ ನಂತರ ಎರಡು ಪಕ್ಷಕ್ಕೆ ಆಂತಕ ಪ್ರಾರಂಭವಾಗಿದೆ. ಬಿಜೆಪಿ ಮನೆಯವರ ಮನೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಎಂದರು.

ತಮ್ಮ ವಿರುದ್ಧ ಬಿಜೆಪಿ ಟ್ವೀಟ್ ವಿಚಾರವಾಗಿ ಮಾತನಾಡಿದ ಅವರು, ಆ ಪದ ಬಳಕೆ ಬಿಜೆಪಿ ಅವರಿಗೆ ಅನ್ವಯವಾಗುತ್ತದೆ. ಪ್ರತಿನಿತ್ಯ ಅದರ ಆಧಾರದ ಮೇಲೆ ಅವರು ನಡೆಯುವುದು ಎಂದು ತಿರುಗೇಟು ನೀಡಿದ್ದಾರೆ.

ಜೀವನದಲ್ಲಿ ಕೆಲ ಕೆಟ್ಟ ಘಟನೆಗಳು ನಡೆದಿವೆ. ದಾರಿ ತಪ್ಪಿದ್ದೆ ಅದನ್ನು ಸರಿ ಮಾಡಿಕೊಂಡಿದ್ದೇನೆ. ನಮ್ಮ ಬಂಡವಾಳ ಏನಿದ್ರು ಬಿಚ್ಚಿಡಲು ಹೇಳಿ ನನ್ನದು ತೆರದ ಪುಸ್ತಕ ನಾನು ಇನ್ನೊಬ್ಬರ ರೀತಿ ಕದ್ದುಮುಚ್ಚಿ ಮಾಡಿಲ್ಲಾ. ನಾನು ವಿಧಾನಸಭೆ ಕಲಾಪದಲ್ಲಿಯೇ ಚರ್ಚೆ ಮಾಡಿದ್ದೇನೆ ಎಂದರು.

ನನ್ನಿಂದ ಸಮಾಜಕ್ಕೆ ಯಾವುದೇ ತಪ್ಪು ಆಗಿಲ್ಲಾ, ಬಿಜೆಪಿ ಯವರು ಒಬ್ಬಬ್ಬರದು ಒಂದೊಂದು ಇತಿಹಾಸ ಇದೆ ಅದರ ಬಗ್ಗೆ ಎಚ್ಚರಿಕೆ ಇರಲಿ. ನಾನು ಯಾರ ಜೊತೆ ರಾಜೀ ಮಾಡಿಕೊಂಡಿಲ್ಲಾ ಕಾಂಗ್ರೆಸ್ ಮತ್ತು ಬಿಜೆಪಿ ಜೊತೆ ಹೋರಾಟ ಮಾಡುತ್ತಿದ್ದೇನೆ. ವ್ಯಯಕ್ತಿಕ ವಿಚಾರಗಳನ್ನು ಕೆದಕೋದರಿಂದ ಯಾರಿಗೆ ಉಪಯೋಗ, ನನ್ನ ವ್ಯಯಕ್ತಿಕ ವಿಚಾರ ಪ್ರಸ್ತಾಪದಿಂದ ನಾನು ಆತಂಕಕ್ಕೊಳಗಾಗುವುದಿಲ್ಲಾ, ನಾಯಕರು ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕು. ನಿಮ್ಮ ಹತ್ತರಷ್ಟು ಕೆಸರನ್ನು ನಾನು ಎರಚಬಲ್ಲೆ ಎಂದು ಎಚ್ಚರಿಕೆ ನೀಡಿದರು.

Related Articles

Leave a Reply

Your email address will not be published.

Back to top button